ನಗರ ಅರಣ್ಯ ಇಲಾಖೆ ಕಚೇರಿ ಎದುರು ಹೋಬಳಿ ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ಡಿಎಫ್‌ಒ ಯಾಜುದ್ದೀನ್ ಅಹವಾಲು ಆಲಿಸಿದರು. ತೀ.ನ.ಶ್ರೀನಿವಾಸ್, ರಮೇಶ, ಸುಬ್ರಹ್ಮಣ್ಯ, ಉಮೇಶ್, ಸುಮಾ ಸುಬ್ರಹ್ಮಣ್ಯ ಇತರರಿದ್ದರು. 
ಶಿವಮೊಗ್ಗ

ರೈತರ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ

ಹೊಸನಗರ: ನಗರ ಹೋಬಳಿ ರೈತರ ಒಕ್ಕಲೆಬ್ಬಿಸುವಿಕೆ ವಿರೋಧಿಸಿ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿಎ್ಒ ಯಾಜುದ್ದೀನ್ ಅಹವಾಲು ಆಲಿಸಿ ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕರಿಮನೆ ಗ್ರಾಪಂ ವ್ಯಾಪ್ತಿಯ ಕಾಡಿಗ್ಗೇರಿ ಭಾಗದ 40ಕ್ಕ್ಕೂ ಹೆಚ್ಚು ನಿವಾಸಿಗಳಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ನಗರ ಹೋಬಳಿ ರೈತರು ಅರಣ್ಯ ಇಲಾಖೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಡಿಎ್ಒ ಯಾಜುದ್ದೀನ್ ಅಹವಾಲು ಆಲಿಸಿದರು. ಈ ವೇಳೆ ರೈತರು ತಮಗೆ ನೀಡಿದ ನೋಟಿಸ್ ವಾಪಸ್ ಪಡೆಯುವ ತನಕ ಧರಣಿ ನಡೆಸುವುದಾಗಿ ತಿಳಿಸಿದರು. ಮೇಲ್ನೋಟಕ್ಕೆ ನೋಟಿಸ್ ನೀಡಿರುವುದು ತಪ್ಪಾಗಿದೆ. ನಾನು ಕೂಡ ಹೊಸದಾಗಿ ಬಂದಿದ್ದೇನೆ. ನೋಟಿಸ್ ಅನ್ನು ನಮ್ಮ ಸಿಬ್ಬಂದಿ ಗೊತ್ತಿಲ್ಲದೆ ರೈತರಿಗೆ ರವಾನಿಸಿದ್ದಾರೆ. ಆದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳಿಗೆ ಬರುತ್ತದೆ. ಅವರೊಂದಿಗೆ ಮಾತನಾಡುವೆ ಎಂದು ಡಿಎ್ಒ ತಿಳಿಸಿದರು. ಆದರೆ ಇದಕ್ಕೊಪ್ಪದ ರೈತರು ವ್ಯವಸ್ಥಾಪನಾ ಅಧಿಕಾರಿ ಬರುವ ತನಕ ಪ್ರತಿಭಟನೆ ನಿಲ್ಲದು ಎಂದು ಪಟ್ಟುಹಿಡಿದರು.
ಸಿಪಿಐ ಎಂ.ಐ.ಗೌಡಪ್ಪ ಗೌಡ್ರ ಮಾತನಾಡಿ, ಧರಣಿ ಮುಂದುವರಿಸುವುದಾದರೆ ನಮ್ಮ ಒಂದಿಷ್ಟು ನಿಯಮ ಪಾಲಿಸಬೇಕು ಎಂದು ಹೇಳಿದಾಗ ಮಾತಿನ ಚಕಮಕಿ ನಡೆಯಿತು. ಬಳಿಕ ರೈತರ ಒತ್ತಾಯಕ್ಕೆ ಮಣಿಸಿ ಡಿಎಫ್‌ಒ ಅವರು, ವ್ಯವಸ್ಥಾಪನಾ ಅಧಿಕಾರಿಯನ್ನು ಕರೆದುಕೊಂಡು ಬರುವ ಭರವಸೆ ನೀಡುತ್ತೇನೆ. ಪ್ರತಿಭಟನೆ ನಿಲ್ಲಿಸಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು, ಅಲ್ಲಿತನಕ ಧರಣಿ ಕೂರುವುದಿಲ್ಲ. ಆದರೆ ಕಚೇರಿ ಎದುರು ಹಾಕಿದ ಶಾಮಿಯಾನ ಹಾಗೆಯೇೀ ಇರುತ್ತದೆ. ನಮಗೆ ಕೊಟ್ಟ ನೋಟಿಸ್ ವಾಪಸ್ ಪಡೆಯದಿದ್ದರೆ ಪ್ರತಿಭಟನೆ ಮತ್ತೆ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತೀ.ನ.ಶ್ರೀನಿವಾಸ್, ರಮೇಶ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಉಮೇಶ್, ಸತೀಶ ಪಟೇಲ್, ಕರುಣಾಕರ ಶೆಟ್ಟಿ, ನಿತಿನ್, ಸುಮಾ ಸುಬ್ರಹ್ಮಣ್ಯ, ಎಚ್.ಜಿ.ರಮಾಕಾಂತ, ಮಂಜುನಾಥ್, ಗಣೇಶ, ವಿನಾಯಕ, ರಾಜೇಶ, ಚಂದ್ರಪ್ಪ, ಗಣೇಶ ಬೆಳ್ಳಿ, ಗ್ರೆಗೋರಿ ರೆಬೆಲ್ಲೋ, ಸಂತೋಷ್‌ಕುಮಾರ್, ಗೋಪಾಲ ಶೆಟ್ಟಿ, ಹೆನ್ರಿ ಡಿಸೋಜ, ಅಣ್ಣಪ್ಪ, ಬಾಬು, ಗಣೇಶ, ವಿಶ್ವನಾಥ, ನವೀನ್ ಇತರರಿದ್ದರು.