ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆ 
ಶಿವಮೊಗ್ಗ

ಲಕ್ಕಿ ಡ್ರಾ ಹೆಸರಲ್ಲಿ ರೈತನಿಗೆ 4.04 ಲಕ್ಷ ರೂ. ವಂಚನೆ Fraud Case

ಶಿವಮೊಗ್ಗ: ನ್ಯಾಪ್‌ಟಾಲ್ ಲಕ್ಕಿ ಡ್ರಾನಲ್ಲಿ ಲಕ್ಷಾಂತರ ರೂ. ಬಹುಮಾನ ಗೆದ್ದಿರುವುದಾಗಿ ಶಿವಮೊಗ್ಗದ ರೈತನಿಗೆ ನಂಬಿಸಿ 4.04 ಲಕ್ಷ ರೂ. ವಂಚಿಸಲಾಗಿದೆ.

ಶಿವಮೊಗ್ಗ: ನ್ಯಾಪ್‌ಟಾಲ್ ಲಕ್ಕಿ ಡ್ರಾನಲ್ಲಿ ಲಕ್ಷಾಂತರ ರೂ. ಬಹುಮಾನ ಗೆದ್ದಿರುವುದಾಗಿ ಶಿವಮೊಗ್ಗದ ರೈತನಿಗೆ ನಂಬಿಸಿ 4.04 ಲಕ್ಷ ರೂ. ವಂಚಿಸಲಾಗಿದೆ.

ರೈತ ನ.3ರಂದು ಮನೆಯಲ್ಲಿದ್ದಾಗ ನ್ಯಾಪ್‌ಟಾಲ್ ಕಂಪನಿ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಬಂದಿತ್ತು. ಅದನ್ನು ತೆರೆದು ನೋಡಿದಾಗ ಲಕ್ಕಿ ಡ್ರಾದಲ್ಲಿ 12.80 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ ಎಂದಿತ್ತು. ಅದನ್ನು ನಂಬಿದ ರೈತ ಲೆಟರ್ ಕೆಳಗಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ವಿಚಾರಿಸಿದ್ದರು. ಆ ಕಡೆಯಿಂದ ಮಾತನಾಡಿದ ವಂಚಕರು, ಲಾಟರಿ ಹಣ ಪಡೆಯಲು ಮೊದಲಿಗೆ ಪ್ರೊಸೆಸಿಂಗ್ ಶುಲ್ಕ 12,800 ರೂ. ಪಾವತಿಸುವಂತೆ ತಿಳಿಸಿ ರೈತನಿಂದ ಹಣ ವರ್ಗಾಯಿಸಿಕೊಂಡಿದ್ದರು.

ಬಳಿಕ ಮತ್ತೆ ಕರೆ ಮಾಡಿದ ವಂಚಕರು ಸಿಜಿಎಸ್‌ಟಿ , ಎಸ್‌ಜಿಎಸ್‌ಟಿ, ಕಾರ್ಪೊರೇಟ್ ಟ್ಯಾಕ್ಸ್ ಸೇರಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದಿದ್ದಾರೆ. ವಂಚಕರು ನೀಡಿದ ಖಾತೆಗೆ ರೈತ 4,04,600 ರೂ. ವರ್ಗಾವಣೆ ಮಾಡಿದ್ದಾರೆ. ಹಣ ಪಾವತಿಸಿದ ನಂತರವೂ ಬಹುಮಾನದ ಮೊತ್ತ ಬಾರದೇ ಇದ್ದಾಗ ರೈತನಿಗೆ ಅನುಮಾನ ಮೂಡಿದೆ. ಈ ವಿಷಯವನ್ನು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಾಗ ತಾನು ಸೈಬರ್ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ರೈತ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.