ಸೋಮಶೇಖರ್ ಲ್ಯಾವಿಗೆರೆ 
ಶಿವಮೊಗ್ಗ

ರಂಜನೆಗಾಗಿ ಮಾಜಿ ಶಾಸಕರಿಂದ ಸುಳ್ಳು | congress leader pressmeet

ಸಾಗರ: ಮಾಜಿ ಶಾಸಕ ಹರತಾಳು ಹಾಲಪ್ಪ ಜನರನ್ನು ರಂಜಿಸಲು ಸಾರ್ವಜನಿಕವಾಗಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಾಗರ ನಗರ ಪ್ರಾಧಿಕಾರ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಹೇಳಿದರು.
ಶಾಸಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಸಚಿವ ಸ್ಥಾನ ಸಿಕ್ಕರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು ಎಂಬ ಆಶಯ ಅವರದಾಗಿತ್ತು. ಹಾಗಾಗಿ ಮೂರು ತಿಂಗಳು ಬೆಂಗಳೂರಿನಲ್ಲಿದ್ದರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಿ. ಆದರೆ ಹೋರಾಟದ ನೆಪದಲ್ಲಿ ಶಾಸಕರ ತೇಜೋವಧೆ ಮಾಡುವುದನ್ನು ಸಹಿಸುವುದಿಲ್ಲ. ಗ್ರಾಮ ಪಂಚಾಯಿತಿ ಮೀಸಲಾತಿಯಲ್ಲಿ ಶಾಸಕರ, ನಮ್ಮ ಹಸ್ತಕ್ಷೇಪ ಇಲ್ಲ. ಬಿಜೆಪಿ ಅವಧಿಯಲ್ಲಿ ಸರ್ವಪಕ್ಷದ ಸಭೆಯನ್ನು ಎಷ್ಟು ಬಾರಿ ಕರೆದು ಚರ್ಚೆ ಮಾಡಿದ್ದೀರಿ? ಮೀಸಲಾತಿ ನಿಗದಿಪಡಿಸುವುದು ಚುನಾವಣಾ ಆಯೋಗದ ಕೆಲಸ. ತಾಲೂಕಿನಲ್ಲಿ ಹಾಳಾಗಿದ್ದ ಮಳೆಮಾಪನ ಕೇಂದ್ರಗಳ ದುರಸ್ತಿಗಾಗಿ ಶಾಸಕರು ಆದ್ಯತೆ ನೀಡಿದ್ದರಿಂದ ಪ್ರಸ್ತುತ ಎಲ್ಲ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಗ್ರಾಮ ಪಂಚಾಯಿತಿ ಮೀಸಲಾತಿ ಗಾಂಧಿಮಂದಿರ, ಪ್ರವಾಸಿ ಮಂದಿರದಲ್ಲಿ ಆಗಿದೆ ಎಂದು ಬಿಜೆಪಿ ಮುಂಂಡರು ಹೇಳಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಹೇಗೆ ನಿಭಾಯಿಸಿದ್ದರು? ಕ್ಷೇತ್ರದ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಕೈಬಿಡಿ. ಮೀಸಲಾತಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಯಾರೋ ಕೆಲಸ ಮಾಡಿದ್ದನ್ನು ನಾನೇ ಮಾಡಿಸಿದ್ದು ಎಂದು ಪ್ರಚಾರ ಪಡೆಯುವ ಹುಚ್ಚು ಮಾಜಿ ಶಾಸಕ ಹರತಾಳು ಹಾಲಪ್ಪ ಅವರಿಗಿದೆ. ಇದೀಗ ತಾವು ಪ್ರತಿಭಟನೆ ನಡೆಸಿದ್ದರಿಂದಲೇ ಮಳೆಮಾಪನ ಯಂತ್ರಗಳು ರಿಪೇರಿಯಾಗಿವೆ ಎಂದು ಹೇಳಿದರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕ ಗಣಪತಿ ಮಂಡಗಳಲೆ ಹಾಜರಿದ್ದರು.