ಶಿವಮೊಗ್ಗ ವಿದ್ಯಾನಗರದ ಗೋಡೌನ್ ಮೇಲೆ ಎಡಿಸಿ ವಿ.ಅಭಿಷೇಕ್ ನೇತೃತ್ವದ ತಂಡ ದಾಳಿ ನಡೆಸಿತು.
ಶಿವಮೊಗ್ಗ: ವಿದ್ಯಾನಗರದ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಲಾಗಿದ್ದ ಗೋಡೌನ್(Godown) ಮೇಲೆ ಅಧಿಕಾರಿಗಳ ತಂಡ ಸೋಮವಾರ ಸಂಜೆ ದಾಳಿ ನಡೆಸಿದೆ. ಅವಧಿ ಮೀರಿದ ಭಾರೀ ಪ್ರಮಾಣದ ತಿಂಡಿ ತಿನಿಸು ಪತ್ತೆ ಮಾಡಲಾಗಿದೆ.
ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಉಪ ವಿಭಾಗಾಧಿಕಾರಿ ಸತ್ಯನಾರಾಯಣ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಶಿವಮೊಗ್ಗದಲ್ಲಿ ಮಾರಾಟ ಮಾಡಲು ಬೆಂಗಳೂರಿನಿಂದ ತಂದಿದ್ದ ವಿವಿಧ ಆಹಾರ ಪದಾರ್ಥ(Foodstuff)ಗಳನ್ನು ಈ ಗೋಡೌನ್‌ನಲ್ಲಿ ದಾಸ್ತಾನು ಮಾಡಲಾಗಿತ್ತು.
ಗೋಡೌನ್‌ನಲ್ಲಿ ಅವಧಿ ಮುಗಿದಿದ್ದರೂ ರಾಶಿ ರಾಶಿ ತಿಂಡಿ ಪ್ಯಾಕೆಟ್(Packet)ಗಳನ್ನು ಸಂಗ್ರಹಿಸಿಡಲಾಗಿತ್ತು. ಇದನ್ನು ಕಂಡು ಅಧಿಕಾರಿಗಳ ತಂಡವೇ ಬೆಸ್ತು ಬಿದ್ದಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ಎಲ್ಲ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ನಾಶಪಡಿಸಿದರು. ಗೋಡೌನ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಲಾಗಿದೆ.