ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪಮಾತನಾಡಿದರು. ಬಿಜೆಪಿ ನಗರಾಧ್ಯಕ್ಷ ಮೋಹನ್‌ರೆಡ್ಡಿ, ಪ್ರಮುಖ ಎಸ್.ಜ್ಞಾನೇಶ್ವರ ಸುದ್ದಿಗೋಷ್ಠಿಯಲ್ಲಿದ್ದರು. 
ಶಿವಮೊಗ್ಗ

ಭಿಕ್ಷೆ ಬೇಡಿದರೂ ಅನುದಾನ ಕೊಡಲಿಲ್ಲ । MLA Channabasappa

ಶಿವಮೊಗ್ಗ: ಶಿವಮೊಗ್ಗದಲ್ಲಿ 884 ಮಂದಿ ಬಡವರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹಕ್ಕುಪತ್ರ(Hakku patra) ಕೊಡಬೇಕೆಂದು ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ಅವರಲ್ಲಿ ಭಿಕ್ಷೆ ಬೇಡಿದರೂ 10 ಕೋಟಿ ರೂ. ಕೊಡಲಿಲ್ಲ. ಆದರೆ ಬೆಂಗಳೂರಿ(Bangalore)ನಲ್ಲಿ ಅಕ್ರಮ ನಿವಾಸಿಗಳಿಗೆ 22 ಕೋಟಿ ರೂ. ಖರ್ಚು ಮಾಡಿ ವಸತಿ ಸಮುಚ್ಛಯ ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.
ಸಾರ್ವಜನಿಕರ ತೆರಿಗೆ ಹಣದಿಂದ ಕೋಗಿಲು ಬಳಿ ಕಾಂಗ್ರೆಸ್ ಸರ್ಕಾರ(Congress govt) ನಿವೇಶನ ನೀಡುತ್ತಿರುವುದು ಸಂವಿಧಾನಬಾಹಿರವಾಗಿದೆ. ಇದು ಸರ್ಕಾರದ ಧ್ವಂಧ ನಿಲುವಾಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಅವರ ಒಂದು ಟ್ವಿಟ್(Twitt), ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಒಂದು ದೂರವಾಣಿ ಕರೆಗೆ ಥಟ್ ಅಂಥ ಎದ್ದುನಿಂತು ಅತಿಕ್ರಮಣದಾರರಿಗೆ ತಲಾ 11.20 ಲಕ್ಷ ರೂ. ವೆಚ್ಚದ ಮನೆ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ರಾಜ್ಯದ ಅನೇಕ ಕಡೆ 30ರಿಂದ 40 ವರ್ಷಗಳಿಂದ ಬಡವರು ಕಂದಾಯ, ಗಾಮ ಠಾಣಾ(Grama tana)ಗಳಲ್ಲಿ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಬಿಜೆಪಿ(Bjp) ಅವರಿಗೆ ಹಕ್ಕುಪತ್ರಕ್ಕಾಗಿ ಹೋರಾಡುತ್ತಾ ಬಂದಿದೆ. ಸರ್ಕಾರದ ವಿವಿಧ ಕಾಯಿದೆ, ಕಾನೂನು ನಿಯಮಗಳ ತೊಡಕು ಇದ್ದಿದ್ದರಿಂದ ಇನ್ನೂ ಅವರಿಗೆ ಹಕ್ಕುಪತ್ರ ನೀಡಲಾಗಲಿಲ್ಲ. ಆದರೆ ಕೇರಳ(Kerala)ದಿಂದ ವಲಸೆ ಬಂದು ಕೋಗಿಲು(Kogilu)ನಲ್ಲಿ ಅಕ್ರಮ ನಿವೇಶನ ನಿರ್ಮಿಸಿ ವಾಸಿಸುತ್ತಿದ್ದ ಮುಸ್ಲಿಂಮರಿಗೆ ಬಯಪ್ಪನಹಳ್ಳಿಯಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ವಸತಿ ಸಮುಚ್ಛಯದಲ್ಲಿ ಮನೆ ಕೊಡುತ್ತಿರುವುದು ಮತ ಬ್ಯಾಂಕ್ ರಾಜಕಾರಣವಲ್ಲದೆ ಮತ್ತೇನು ಅಲ್ಲ ಎಂದರು.