ಆನಂದಪುರ ಸಮೀಪದ ಇರುವಕ್ಕಿ ಕೃಷಿ ವಿವಿ ನೂತನ ಕುಲಪತಿ ಡಾ.ಎಂ.ವಿ.ಧನಂಜಯ ಅಧಿಕಾರ ಸ್ವೀಕರಿಸಿದರು. 
ಶಿವಮೊಗ್ಗ

50 ಕೋಟಿ ರೂ. ವೆಚ್ಚದ ಕೃಷಿ ಒನ್​ ಟಕ ಸ್ಥಾಪನೆ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರ ಸ್ವೀಕಾರ ಸಮಾರಂಭ
  • ಇರುವಕ್ಕಿ ಕೃಷಿ ವಿವಿ ಕುಲಪತಿ ಧನಂಜಯ ಭರವಸೆ
  • 50 ಕೋಟಿ ರೂ. ವೆಚ್ಚದ ಕೃಷಿ ಒನ್​ ಟಕ ಸ್ಥಾಪನೆ
ಆನಂದಪುರ: ಕೃಷಿ ತಂತ್ರಜ್ಞಾನ ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ 50 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಸಹ್ಯಾದ್ರಿ ಕೃಷಿ ಒನ್​ ಮಾದರಿ ಟಕ ಸ್ಥಾಪನೆ ಮಾಡಲಾಗುವುದು ಎಂದು ಕೃಷಿ ವಿವಿ ಕುಲಪತಿ ಡಾ.ಎಂ.ವಿ. ಧನಂಜಯ ಹೇಳಿದರು.
ಇರುವಕ್ಕಿಯ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಇಂದು ಕೃಷಿ ೇತ್ರ ಸಂಕಷ್ಟದಲ್ಲಿದೆ ಎಂದು ತಿಳಿಸಿದರು.
ವಿಜ್ಞಾನಿಗಳು ಕಂಡುಹಿಡಿದ ವೈಜ್ಞಾನಿಕ ಸಾಧನಗಳು, ಯಂತ್ರಗಳು ರೈತರನ್ನು ತಲುಪುತ್ತಿಲ್ಲ. ಈ ದೃಷ್ಟಿಯಿಂದ ರೈತರ ಅಭಿವೃದ್ಧಿಗೆ ಇನ್ನು ಆರು ತಿಂಗಳಲ್ಲಿ ಹೋಬಳಿ ಮಟ್ಟದಲ್ಲಿ ಸಹ್ಯಾದ್ರಿ ಕೃಷಿ ಒನ್​ ಮಾದರಿಯ ಟಕ ಸ್ಥಾಪನೆಯ ಗುರಿ ಇದೆ. ರೈತರು ಅಲೆದಾಡುವ ಪರಿಸ್ಥಿತಿ ಉಂಟಾಗಬಾರದು. ನಾವು ರೈತರ ಮನೆ ಬಾಗಿಲಿಗೆ ಹೋಗಬೇಕು ಅನ್ನುವ ಆಶಯ ಹೊಂದಿದ್ದೇನೆ ಎಂದು ತಿಳಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕಾಗಿದೆ. ರೈತರನ್ನು ಗಣನೆಗೆ ತೆಗೆದುಕೊಂಡು ಅವರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಿದಾಗ ಮಾತ್ರ ವಿಶ್ವವಿದ್ಯಾಲಯದ ಬಗ್ಗೆ ರೈತರಲ್ಲಿ ಉತ್ತಮ ಅಭಿಪ್ರಾಯ ಮೂಡಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲಾಗುವುದೆಂದು ಭರವಸೆ ನೀಡಿದರು.
ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಜೋಳ, ಭತ್ತ ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಬಲಿಷ್ಠರಾಗುವುದು ಅಸಾಧ್ಯ. ಆದ್ದರಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರೈತರ ಬೆಳೆಗಳನ್ನು ಬೆಳೆದು ಮಾರಾಟ ಮಾಡುವುದು ಮಾತ್ರವಲ್ಲದೆ ಅವುಗಳ ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆ ನೀಡಲು ನನ್ನದೇ ಹಲವಾರು ಯೋಜನೆಗಳಿವೆ. ಅವುಗಳನ್ನು ಕಾರ್ಯಕರ್ತಗೊಳಿಸಲಾಗುವುದು. ತರಬೇತಿ, ೇತ್ರೋತ್ಸವ, ಕೃಷಿ ಮೇಳಗಳ ಮೂಲಕವೂ ಹೆಚ್ಚಿನ ಮಾಹಿತಿ ಒದಗಿಸಲಾಗುವುದು ಎಂದರು.
ಅಧಿಕಾರಿಗಳು ನಿರಂತರ ರೈತರ ಸಂಪರ್ಕದಲ್ಲಿರಬೇಕು. ವಿಶ್ವವಿದ್ಯಾಲಯದ ಪ್ರತಿಯೊಬ್ಬ ಅಧಿಕಾರಿಯೂ ನಿರಂತರವಾಗಿ ಕನಿಷ್ಠ 1ಸಾವಿರ ರೈತರ ಸಂಪರ್ಕ ಹೊಂದುವ ಮೂಲಕ 5&6 ಲ ರೈತರಿಗೆ ಉಪಯುಕ್ತ ಮಾಹಿತಿ ಹಾಗೂ ನವೀನ ಮಾದರಿಯ ತಂತ್ರಜ್ಞಾನಗಳನ್ನ ತಲುಪಿಸುವ ಹೊಸ ಗುರಿ ಹೊಂದಲಾಗಿದೆ ಎಂದು ಹೇಳಿದರು. ವಿವಿಯ ಉಪನ್ಯಾಸಕರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.