ತೀರ್ಥಹಳ್ಳಿ ಮಲ್ನಾಡ್ ಕೆರಿಯರ್ ಅಕಾಡೆಮಿಯಿಂದ ಅಥ್ಲೀಟ್ ಸ್ನೇಹಾ ಶಾನುವಳ್ಳಿ ಅವರನ್ನು ಸನ್ಮಾನಿಸಲಾಯಿತು. ಸತೀಶ್ ಹೆಗ್ಗೋಡು, ಸುಬ್ರಹ್ಮಣ್ಯ, ರಮೇಶ್ ಇತರರಿದ್ದರು. 
ಶಿವಮೊಗ್ಗ

ಬಾಲ್ಯದಲ್ಲೇ ಕ್ರೀಡಾ ಪ್ರೋತ್ಸಾಹ ಅಗತ್ಯ

ತೀರ್ಥಹಳ್ಳಿ: ಕ್ರೀಡೆ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗ. ಕ್ರೀಡಾ ಸಾಧನೆಗೆ ಬಾಲ್ಯದಲ್ಲೇ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಏಷಿಯನ್ ಗೇಮ್ಸ್‌ನ ಪದಕ ವಿಜೇತೆ ಅಥ್ಲೀಟ್, ಕೊಪ್ಪ ತಾಲೂಕಿನ ಸ್ನೇಹಾ ಶಾನುವಳ್ಳಿ ಹೇಳಿದರು.

ಮಲ್ನಾಡ್ ಕೆರಿಯರ್ ಅಕಾಡೆಮಿಯಿಂದ ಪಟ್ಟಣದಲ್ಲಿ ಏರ್ಪಡಿಸಿದ್ದ ಮ್ಯಾರಥಾನ್ ಓಟದ ನಂತರ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಕ್ರೀಡಾ ಸಾಧನೆಗೆ ಏಕಾಗ್ರತೆ, ನಿರಂತರ ಪರಿಶ್ರಮದೊಂದಿಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಮುಖ್ಯ. ಸಾಧಿಸುವ ಛಲದೊಂದಿಗೆ ಮುಖ್ಯವಾಗಿ ಕನಸು ಕಾಣಬೇಕಿದೆ ಎಂದು ತಿಳಿಸಿದರು.

ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಹೆಗ್ಗೋಡು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿರುವ ಮಲೆನಾಡಿನ ಪ್ರತಿಭೆಯ ಸಾಧನೆ ಇಡೀ ದೇಶ ಹೆಮ್ಮೆ ಪಡುವಂತಿದೆ. ಕಿರಿಯ ಕ್ರೀಡಾಪಟುಗಳಿಗೂ ಮಾದರಿಯಾಗಿದೆ. ಮುಂದಿನ ಒಲಿಂಪಿಕ್ಸ್‌ನಲ್ಲೂ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.

ಮಲ್ನಾಡ್ ಕೆರಿಯರ್ ಅಕಾಡೆಮಿ ಮುಖ್ಯಸ್ಥ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಅಧ್ಯಕ್ಷ ರಮೇಶ್, ನಾಗರಾಜ್ ಗೌಡ, ಉದ್ಯಮಿ ಅಬ್ದುಲ್ ರಹಮಾನ್, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ರಮೇಶ್, ಅಶೋಕ್ ಶೆಟ್ಟಿ, ಸಫಾನ್ ಇತರರಿದ್ದರು.