ಸೊರಬ: ಮಕ್ಕಳು ಭಾವಗೀತೆಗಳನ್ನು ಕಲಿಯುವಂತೆ ಹಾಗೂ ಹಾಡಲು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಸುಗಮ ಸಂಗೀತ ಪರಿಷತ್ ಅಧ್ಯಕ್ಷೆ ಶಾಂತಾ ಶೆಟ್ಟಿ ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ, ಸುಗಮ ಸಂಗೀತ ಕಲಾ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ಅವರ ಗೀತೆಗಳ ಗೀತಾ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾವಗೀತೆ ಹಾಡುವ ಕಲೆಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿ ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ಭಾರತದಲ್ಲಿ ಸುಗಮ ಸಂಗೀತಕ್ಕೆ ಹೆಚ್ಚು ಮನ್ನಣೆ ಇದೆ. ಕರ್ನಾಟಕದಲ್ಲೂ ತನ್ನದೇ ಆದ ಹಿರಿಮೆ ಇದೆ. ಕವಿ ಬಿಎಂಶ್ರೀ ಅವರು ಭಾವಗೀತೆಗೆ ಶಕ್ತಿ ತಂದರು. ಡಾ. ಕಾವೆಂಶ್ರೀ ಅವರು ಭಾವಗೀತೆಯ ಹೊಸ ಹೊಸ ಹಾಡುಗಳನ್ನು ಬರೆದರು ಎಂದರು.
ಸುಗಮ ಸಂಗೀತ ಪರಿಷತ್ ತಾಲೂಕು ಅಧ್ಯಕ್ಷ ಗುರುಮೂರ್ತಿ, ರಾಜಪ್ಪ ಮಾಸ್ತರ್, ಪಾಣಿ ರಾಜಪ್ಪ, ರವಿ, ಹಾಲೇಶ್, ರಾಜು, ಲಕ್ಷ್ಮೀ ಮುರಳೀಧರ್, ರತ್ನಾಕರ್, ಲಕ್ಷ್ಮಣ್, ಈರಪ್ಪ, ನಾಗರಾಜ್ ಗುತ್ತಿ, ರೇವಣಪ್ಪ, ಮೋಹನ್, ಪರಶುರಾಮ್, ಕಾವ್ಯಾ, ರೂಪಾ, ವೀಣಾ ಇತರರಿದ್ದರು.