ಸೊರಬ ಆಶ್ರಯ ಬಡಾವಣೆಯಲ್ಲಿ ಕೃಷಿ ಭವನ ಕಟ್ಟಡಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ನಗರದ ಮಹದೇವಪ್ಪ, ಎಚ್​.ಎನ್​.ನಾಗರಾಜ್​, ಟಿ.ಬಿ.ಸುರೇಶ್​ ಇತರರಿದ್ದರು. 
ಶಿವಮೊಗ್ಗ

ಪ್ರತಿ ತಾಲೂಕಿನಲ್ಲೂ ಕೃಷಿಭವನ ನಿರ್ಮಾಣಕ್ಕೆ ಪ್ರಯತ್ನ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಸಮಾಜದ ಭವನ ಕಟ್ಟಡಕ್ಕೆ ಭೂಮಿ ಪೂಜೆ
  • ಸಚಿವ ಮಧು ಬಂಗಾರಪ್ಪ ಹೇಳಿಕೆ
  • ಪ್ರತಿ ತಾಲೂಕಿನಲ್ಲೂ ಕೃಷಿಭವನ ನಿರ್ಮಾಣಕ್ಕೆ ಪ್ರಯತ್ನ
ಸೊರಬ: ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕೃಷಿ ಭವನ ನಿರ್ಮಾಣ ಮಾಡಿ ಸಾರ್ವತ್ರಿಕಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಸೋಮವಾರ ಕೃಷಿ ಸಮಾಜದ ಭವನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿ ತಾಲೂಕಿನಲ್ಲಿ ರೈತರು ಕನಿಷ್ಠ 500 ರೂ. ಸಂಗ್ರಹಿಸಿದರೆ ಸರ್ಕಾರದ ಯಾವುದೇ ಅನುದಾನದ ಅವಶ್ಯಕತೆ ಬೇಕಿಲ್ಲ. ಸಂಗ್ರಹವಾದ ಹಣದಿಂದ ಇಂತಹ ಭವನ ಮತ್ತಿತರ ಕಾರ್ಯಕ್ರಮಗಳಿಗೆ ಬಳಸಬಹುದು. ನುರಿತ ಕೃಷಿ ತಜ್ಞರಿಂದ ತರಬೇತಿ ಪಡೆದು ಕೃಷಿ ೇತ್ರದಲ್ಲಿ ಸ್ವಾವಲಂಬಿ ಬದುಕು ನಡೆಸಬಹುದು ಎಂದರು
ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಮೈಲುತುತ್ತ ದೊರೆಯುವಂತೆ ಮಾಡುವ ಜತೆಗೆ ಕೃಷಿ ಸಮಾಜ ಭವನ ನಿರ್ಮಾಣವನ್ನು ಶ್ರೀ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕೃಷಿಕ ಸಮಾಜದ ಜಿಲ್ಲಾಧ್ಯ ಎಚ್​.ಎನ್​.ನಾಗರಾಜ್​, ತಾಲೂಕು ಅಧ್ಯ ಟಿ.ಬಿ.ಸುರೇಶ್​, ಉಪಾಧ್ಯಕ್ಷ ಎಸ್​.ಎಂ.ರೇವಣಪ್ಪ, ಜಿಲ್ಲಾ ಉಪಾಧ್ಯ ಉಮೇಶ್​ ಪಾಟೀಲ್​, ಪ್ರಧಾನ ಕಾರ್ಯದರ್ಶಿ ಕೆ.ಎಸ್​.ಶಾಂತಮ್ಮ, ಖಜಾಂಚಿ ಮಂಜುನಾಥ ರಾಮ್​, ಸದಸ್ಯರಾದ ನಾಗರಾಜ್​, ಗಂಗಧರಗೌಡ, ಕೆ.ವಿ.ಗೌಡ, ಎಸ್​.ಪಿ.ಜಯಮಾಲಾ, ಎಚ್​.ಪಿ.ಮಲ್ಲಿಕಾರ್ಜುನ ಗೌಡ, ಶಶಿಕಾಂತ ಗೌಡ, ತಹಸೀಲ್ದಾರ್​ ಕೆ.ಪುರುಂದರ, ಕೃಷಿ ಅಧಿಕಾರಿ ಕೆ.ಜಿ.ಕುಮಾರ ಇತರರಿದ್ದರು.