ವಿದ್ಯುತ್ ವಿತರಣೆ ಖಾಸಗೀಕರಣ ವಿರೋಧಿಸಿ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೆ.ಪುರಂದರ ಅವರಿಗೆ ಮನವಿ ಸಲ್ಲಿಸಿದರು. ಉಮೇಶ್ ಪಾಟೀಲ್, ಸುಭಾಷ್‌ಚಂದ್ರ, ಮಂಜುನಾಥ, ಯೋಗೇಶ್, ಮಹೇಶ್, ಹುಚ್ಚಪ್ಪ ಇತರರಿದ್ದರು. 
ಶಿವಮೊಗ್ಗ

ವಿದ್ಯುತ್ ಖಾಸಗೀಕರಣದಿಂದ ಆರ್ಥಿಕ ಹೊರೆ | Farmers Association protest

ಶಿವಕುಮಾರ ಎಸ್.ಪಿ.
ಸೊರಬ: ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೆ.ಪುರಂದರ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ಖಾಸಗೀಕರಣ ಮಾಡಿ ಟಾಟಾ ಕಂಪನಿಗೆ ಪವರ್ ನೀಡಲು ಮುಂದಾಗಿರುವ ಸರ್ಕಾರದ ನೀತಿ ಖಂಡನೀಯ. ರಾಜ್ಯದಲ್ಲಿ 65ಕ್ಕೂ ಹೆಚ್ಚಿನ ರೈತರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಪಂಪ್‌ಸೆಟ್ ಬಳಸಿ ಬೆಳೆ ಬೆಳೆಯುವ ರೈತರಿಗೆ ವಿದ್ಯುತ್ ಖಾಸಗೀಕರಣದಿಂದ ತೀವ್ರ ತೊಂದರೆಯಾಗಲಿದೆ. ಎಪಿಎಂಸಿ ಕಾಯ್ದೆ, ಭೂಸುಧಾರಣಾ, ವಿದ್ಯುತ್ ಕಾಯ್ದೆ ರದ್ದು ಮಾಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿ ಈಗ ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿದರು.   
ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ ಮಾಡಿದರೆ ಗ್ರಾಮೀಣ ರೈತರಿಗೆ ಅನ್ಯಾಯವಾಗಲಿದ್ದು. ಮೆಸ್ಕಾಂ ವ್ಯಾಪ್ತಿಯಲ್ಲಿ ಅತ್ಯಧಿಕ ಪಂಪ್‌ಸೆಟ್‌ಗಳಿವೆ. ಮೆಸ್ಕಾಂ ಗ್ರಾಮೀಣ ಭಾಗದಲ್ಲಿ ಉತ್ತಮ ವಿದ್ಯುತ್ ಸೇವೆ ನೀಡುತ್ತಿದೆ. ಖಾಸಗಿ ಕಂಪನಿಯು ಲಾಭದ ಉದ್ದೇಶ ಹೊಂದಿದೆ. ಬಡ ರೈತರಿಗೆ ಸಬ್ಸಿಡಿಯೂ ಸಿಗುವುದಿಲ್ಲ. ಕಂಬಗಳು ಮುರಿದರೆ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಳಾದರೆ ಉಚಿತವಾಗಿ ಅಳವಡಿಸುವುದಿಲ್ಲ. ಹಾಗಾಗಿ ಗ್ರಾಹಕರ ಹಿತದೃಷ್ಟಿಯಿಂದ ಟಾಟಾ ಪವರ್ ಕಂಪನಿಯು ವಿದ್ಯುತ್ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಆಗ್ರಹಿಸಿದರು.
ರೈತ ಸಂಘದ ಉಪಾಧ್ಯಕ್ಷ ಉಮೇಶ್ ಪಾಟೀಲ್, ಸುಭಾಷ್‌ಚಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ, ಯೋಗೇಶ್, ತಾಲೂಕ ಉಪಾಧ್ಯಕ್ಷ ಮಹೇಶ್, ಉಳವಿ ಘಟಕದ ಅಧ್ಯಕ್ಷ ಹುಚ್ಚಪ್ಪ, ಅಶೋಕ ಗೌಡ, ಹುಚ್ಚಪ್ಪ, ವಿಶ್ವಾಸ್, ಮಲ್ಲಿಕಾರ್ಜುನ, ವಿಜಯಕುಮಾರ್, ಪುಟ್ಟಪ್ಪ ಇತರರಿದ್ದರು.