ನಗರದ ನೆಹರು ಕ್ರೀಡಾಂಗಣದಲ್ಲಿ ವಿಕಸಿತ ಭಾರತ ಸಂಕಲ್ಪ ಅಭಿಯಾನದ ಅಂಗವಾಗಿ ನಶಾ ಮುಕ್ತ ಯುವ ಸಂಕಲ್ಪ ಅಭಿಯಾನದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಎನ್.ಕೆ.ಜಗದೀಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಹುಲ್ ಬಿದರೆ, ವಿ.ಅಭಿಷೇಕ್, ಐಶ್ವರ್ಯಾ ಶ್ರೀನಿವಾಸ್ ಇದ್ದರು. 
ಶಿವಮೊಗ್ಗ

ಮಾದಕ ದ್ರವ್ಯ ಮುಕ್ತ ವಿಕಸಿತ ಭಾರತಕ್ಕಾಗಿ ಸಂಕಲ್ಪ | Drug-Free Youth Sankalpa

ಶಿವಮೊಗ್ಗ: ಮಾದಕ ದ್ರವ್ಯಗಳಿಂದ ಯುವಶಕ್ತಿ(Youth Power)ಯನ್ನು ರಕ್ಷಿಸುವುದು ಕೇವಲ ಆರೋಗ್ಯದ ಪ್ರಶ್ನೆಯಲ್ಲ, ಅದು ವಿಕಸಿತ ಭಾರತ ನಿರ್ಮಾಣದ ರಾಷ್ಟ್ರೀಯ ಸಂಕಲ್ಪವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲೆಯ ಮೈ ಭಾರತ್ ಹಾಗೂ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಜಂಟಿ ಆಶ್ರಯದಲ್ಲಿ ವಿಕಸಿತ ಭಾರತ ಸಂಕಲ್ಪ ಅಭಿಯಾನದ ಅಂಗವಾಗಿ ನಶಾ ಮುಕ್ತ ಯುವ ಸಂಕಲ್ಪ(Drug-Free Youth Sankalpa) ಅಭಿಯಾನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದ ಅವರು, ಮಾದಕ ದ್ರವ್ಯ ಮುಕ್ತ ವಿಕಸಿತ ಭಾರತಕ್ಕಾಗಿ ಯುವಶಕ್ತಿಯು ಸಂಕಲ್ಪ ಮಾಡಬೇಕಿದೆ ಎಂದರು.
ಜಾಗೃತ ಯುವಜನತೆ, ಸದೃಢ ಸಮಾಜ ಮತ್ತು ಹೊಣೆಗಾರಿಕೆಯ ನಾಗರಿಕತೆಯೇ ನಮ್ಮ ದೇಶದ ಭವಿಷ್ಯವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ. ವ್ಯಸನಮುಕ್ತ(Addiction-free), ಆರೋಗ್ಯಕರ ಹಾಗೂ ಶಕ್ತಿಶಾಲಿ ಯುವ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರಿಂದ ವರ್ಚುವಲ್ ಮೂಲಕ ಉದ್ಘಾಟನೆ ಬಳಿಕ ನಶಾ ಮುಕ್ತ ಭಾರತ ಅಭಿಯಾನದ ನೇರಪ್ರಸಾರವನ್ನು ನೂರಾರು ಯುವಕರೊಂದಿಗೆ ವೀಕ್ಷಿಸಿದ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಜ್ಞೆ ಸ್ವೀಕರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಹುಲ್ ಬಿದರೆ, ಎಡಿಸಿ ವಿ.ಅಭಿಷೇಕ್, ಶಿವಮೊಗ್ಗ ಜಿಲ್ಲಾ ಯುವ ಅಧಿಕಾರಿ ಐಶ್ವರ್ಯಾ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.