ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ 
ಶಿವಮೊಗ್ಗ

ಚಾಲಕನ ವೈಯಕ್ತಿಕ ವಿವರ ಪಡೆದು 4.04 ಲಕ್ಷ ರೂ. ವಂಚನೆ Driver defrauded

ಚಾಲಕರೊಬ್ಬರ ವೈಯಕ್ತಿಕ ವಿವರಗಳನ್ನು ಅಕ್ರಮವಾಗಿ ಪಡೆದುಕೊಂಡ ವಂಚಕರು ಬ್ಯಾಂಕ್ ಖಾತೆಯಿಂದ 4.04 ಲಕ್ಷ ರೂ. ದೋಚಿದ್ದಾರೆ.

ಶಿವಮೊಗ್ಗ: ಚಾಲಕರೊಬ್ಬರ ವೈಯಕ್ತಿಕ ವಿವರಗಳನ್ನು ಅಕ್ರಮವಾಗಿ ಪಡೆದುಕೊಂಡ ವಂಚಕರು ಬ್ಯಾಂಕ್ ಖಾತೆಯಿಂದ 4.04 ಲಕ್ಷ ರೂ. ದೋಚಿದ್ದಾರೆ.

ಚಾಲಕನ ಮೊಬೈಲ್‌ಗೆ ಅ.4ರಂದು ಸಂಜೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಬಗ್ಗೆ ಮೆಸೇಜ್‌ಗಳು ಬಂದಿದ್ದವು. ಹಂತ ಹಂತವಾಗಿ 80 ಸಾವಿರ ರೂ., 89, ಸಾವಿರ ರೂ., 90 ಸಾವಿರ ರೂ., 25 ಸಾವಿರ ರೂ., 90,815,ರೂ., 14,510 ರೂ., ಹಾಗೂ14,800 ರೂ. ಸೇರಿ ಒಟ್ಟು 4,04,125 ರೂ. ಕಡಿತ ಆಗಿತ್ತು.

ಈ ಕುರಿತು ಚಾಲಕ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅವರ ವೈಯಕ್ತಿಕ ಮಾಹಿತಿ ದುರುಪಯೋಗಪಡಿಸಿಕೊಂಡು ವಂಚಕರು ಹಣ ವರ್ಗಾಯಿಸಿಕೊಂಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಚಾಲಕ ದೂರು ನೀಡಿದ್ದು, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.