- ಹೊಸಮನೆ ಬಡಾವಣೆಯಲ್ಲಿ ಕಾರು ಚಾಲಕ ನೇಣುಬಿಗಿದು ಆತ್ಮಹತ್ಯೆ
- ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ
- ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ
ಶಿವಮೊಗ್ಗ: ನಗರದ ಹೊಸಮನೆ ಬಡಾವಣೆ(Hosamane badavane)ಯಲ್ಲಿ ಪತ್ನಿ ಅಗಲಿಕೆ ಹಾಗೂ ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಕಾರು ಚಾಲಕ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಸಮನೆ 5ನೇ ಅಡ್ಡರಸ್ತೆಯ ನಿವಾಸಿ ಮಂಜುನಾಥ್ (45) ಆತ್ಮಹತ್ಯೆ ಮಾಡಿಕೊಂಡ ಚಾಲಕ. ಮಂಜುನಾಥ್ ಅವರ ಪತ್ನಿ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು. ಪತ್ನಿಯ ಅಗಲಿಕೆಯಿಂದ ಅವರು ಮಾನಸಿಕವಾಗಿ ನೊಂದಿದ್ದರು. ಅದರ ಬೆನ್ನಲ್ಲೇ ಎದುರಾದ ಕೌಟುಂಬಿಕ ಸಮಸ್ಯೆ(family problem)ಗಳು ಅವರನ್ನು ಮತ್ತಷ್ಟು ಖಿನ್ನತೆಗೆ ದೂಡಿದ್ದವು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮನನೊಂದ ಮಂಜುನಾಥ್ ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೆಗ್ಗಾನ್ ಆಸ್ಪತ್ರೆ ಶವಾಗಾರ(Meggan Hospital Mortuary)ದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.