ಡಾ. ರವಿ 
ಶಿವಮೊಗ್ಗ

ಈಜು ಸ್ಪರ್ಧೆಯಲ್ಲಿ ಡಾ. ರವಿಗೆ ಚಿನ್ನ

ಶಿಕಾರಿಪುರ: ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ಆಯೋಜನೆಯಾಗಿದ್ದ ವರ್ಲ್ಡ್ ಮಾಸ್ಟರ್ರ್ಸ್‌ ಸ್ಪೋರ್ಟ್ಸ್‌ನಲ್ಲಿ ತಾಲೂಕು ಪಶು ವೈದ್ಯಕೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ರವಿ ಬಂಗಾರದ ಪದಕ ಪಡೆದಿದ್ದಾರೆ.
ಏ.17ರಿಂದ 19ರವರೆಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಡಾ. ರವಿ 50 ಮೀ. ಬಟರ್ ಫ್ಲೈ ವಿಭಾಗದಲ್ಲಿ ಬಂಗಾರದ ಪದಕ ಹಾಗೂ 100 ಮೀ. ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ.
ಸರ್ಕಾರಿ ಕೆಲಸದ ಜತೆ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡು ಈಜು ಸ್ಪರ್ಧೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಡಾ. ರವಿ ಅವರು ನಾಲ್ಕು ವರ್ಷದಿಂದ ನಿರಂತರ ಅಭ್ಯಾಸ ನಡೆಸುತ್ತಿದ್ದಾರೆ. ಸಂಗಮೇಶ್ ಪಾರಶೆಟ್ಟಿ ಮತ್ತು ರಮೇಶ್ ಪಾರಶೆಟ್ಟಿ ಅವರ ಹತ್ತಿರ ಈಜುಸ್ಪರ್ಧೆಗೆ ಪೂರಕ ತರಬೇತಿ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕೆಂಬ ನನ್ನ ಕನಸು ನನಸಾಗಿದೆ. ನನಗೆ ಈ ಜಯ ಸಿಗಲು ಇಲಾಖೆಯ ಎಲ್ಲರ ಸಹಕಾರ ಮತ್ತು ಕೋಚ್‌ಗಳ ನಿರಂತರ ತರಬೇತಿ ಕಾರಣ. ಅವಕಾಶ ದೊರೆತಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ. ಬಾಲ್ಯದ ನನ್ನ ಈಜು ಹವ್ಯಾಸದ ಪ್ರತಿಫಲವಾಗಿ ಪ್ರಶಸ್ತಿ ಗೆದ್ದಿದ್ದೇನೆ ಎನ್ನುತ್ತಾರೆ ಡಾ. ರವಿ.