ಶರಾವತಿ ಪಂಪ್ಡ್ ಪ್ರಾಜೆಕ್ಟ್ ವಿರೋಧಿಸಿ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಡಾ.ಕೆ.ಎಲ್.ಶ್ರೀಪತಿ, ಡಾ.ಶೇಖರ್ ಗೌಳೇರ್, ಮಹದೇವ ಸ್ವಾಮಿ, ಶ್ರೀಕಾಂತ್ ಮುಂತಾದವರು ಸುನೀಲ್ ಲಿಮಯೇ ಅವರಿಗೆ ಮನವಿ ಸಲ್ಲಿಸಿದರು.
- ಈಶ್ವರಪ್ಪ ನೇತೃತ್ವದಲ್ಲಿ ಮನವಿ
- ಪರಿಸರ ವಿರೋಧಿ ಕೃತ್ಯಕ್ಕೆ ಆಕ್ಷೇಪ
ಶಿವಮೊಗ್ಗ: ಯಾವುದೇ ಕಾರಣಕ್ಕೂ ಶರಾವತಿ (sharavati) ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ (project) ಗೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿ ರಾಷ್ಟ್ರಭಕ್ತರ ಬಳಗ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಗಳ ಪ್ರಮುಖರು ಕೇಂದ್ರೀಯ ಅಧಿಕಾರ ಸಮಿತಿ ಸದಸ್ಯ ಸುನೀಲ್ ಲಿಮಯೇ ಅವರಿಗೆ ಮನವಿ (apeal) ಸಲ್ಲಿಸಿದರು.
ನಗರದ ಶ್ರೀಗಂಧ ಕೋಠಿಯಲ್ಲಿರುವ ಸಿಸಿಎಫ್ ಕಚೇರಿಗೆ ಆಗಮಿಸಿದ್ದ ಸುನೀಲ್ ಲಿಮಯೇ ಅವರನ್ನು ಭೇಟಿಯಾದ ಕೆ.ಎಸ್.ಈಶ್ವರಪ್ಪ ನೇತೃತ್ವದ ನಿಯೋಗ, ಶರಾವತಿ ಪಂಪ್ಡ್ ಪ್ರಾಜೆಕ್ಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು. ಈ ಯೋಜನೆ ವಿರುದ್ಧ 75 ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಆದರೂ ಯೋಜನೆ ಅನುಷ್ಠಾನಕ್ಕೆ ತೆರೆಮರೆಯ ಪ್ರಯತ್ನ ನಡೆಯುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುನೀಲ್ ಆಕ್ಷೇಪಣೆಗಳು ಸಲ್ಲಿಕೆಯಾಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಯೋಜನೆ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿ, ಶರಾವತಿ ಪಂಪ್ಡ್ ಪ್ರಾಜೆಕ್ಟ್‌ನ ಡಿಪಿಆರ್‌ನ ವಿವರಣೆ ಕೇಳಿದರೂ ಅಧಿಕಾರಿಗಳು ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಡಾ. ಶೇಖರ್ ಗೌಳೇರ್, ಡಾ. ಕೆ.ಎಲ್.ಶ್ರೀಪತಿ, ಶ್ರೀಕಾಂತ್, ಜನಾರ್ದನ ಪೈ, ಮಹದೇವ ಸ್ವಾಮಿ, ಪರಿಸರ, ರಮೇಶ್, ದಿಲೀಪ್ ನಾಡಿಗ್, ರವೀಂದ್ರ ಇತರರಿದ್ದರು.