ಕಲಾವಿದ ವಿನಾಯಕ ಶೇಟ್ ಅವರು ಶಿಕಾರಿಪುರದ ವೃಂದಾವನಕ್ಕೆ ನೀಡಿರುವ ಬೆಳ್ಳಿ ಕಣ್ಣುಗಳು ಮತ್ತು ನಾಮಗಳನ್ನು ಶ್ರೀ ಗುರುರಾಜ ಸೇವಾ ಟ್ರಸ್ಟ್ ಖಜಾಂಚಿ ಕವಲಿ ಸುಬ್ರಹ್ಮಣ್ಯ ಸ್ವೀಕರಿಸಿದರು.
ಶಿಕಾರಿಪುರ: ಸಮೀಪದ ಉಡುಗಣಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ವೃಂದಾವನಕ್ಕೆ ಬೆಂಗಳೂರಿನ ನಟ ವಿನಾಯಕ ಶೇಟ್ ಅವರು ಬೆಳ್ಳಿ ನೇತ್ರ ಮತ್ತು ನಾಮಗಳನ್ನು ಅರ್ಪಿಸಿದರು.
ಶ್ರೀ ಗುರುರಾಜ ಸೇವಾ ಟ್ರಸ್ಟ್ ಖಜಾಂಚಿ, ತಾಪಂ ಮಾಜಿ ಅಧ್ಯಕ್ಷ ಕವಲಿ ಸುಬ್ರಹ್ಮಣ್ಯ ಮಾತನಾಡಿ, ಮಠದಲ್ಲಿ ರಾಯರ ವೃಂದಾವನಕ್ಕೆ ಹಿತ್ತಾಳೆ ಹೊದಿಕೆ ಮಾಡಿಸಲಾಗಿದೆ. ನೂತನವಾಗಿ ಶ್ರೀದೇವಿ ಭೂದೇವಿ ವಿಗ್ರಹಗಳನ್ನು ಮಠದಲ್ಲಿ ಪ್ರತಿಷ್ಠಾಪಿಸಲು ಸಂಕಲ್ಪ ಮಾಡಲಾಗಿದೆ. ವರ್ಷಪೂರ್ತಿ ಮಠದಲ್ಲಿ ಸಾಂಪ್ರದಾಯಿಕ ಪೂಜೆ, ಧರ್ಮೋತ್ಥಾನ ಕಾರ್ಯಗಳು ನಡೆಯುತ್ತಿವೆ. ವಿನಾಯಕ ಶೇಟ್ ಅವರ ಧಾರ್ಮಿಕ ಕಳಕಳಿ ಶ್ಲಾಘನೀಯ ಎಂದರು.
ಶ್ರೀ ಗುರುರಾಜ ಸೇವಾ ಟ್ರಸ್ಟ್ ಅಧ್ಯಕ್ಷ ಮಳೂರು ರಾಜೀವ್ ಮತ್ತು ಪದಾಧಿಕಾರಿಗಳು ಇದ್ದರು.