ಕ್ಲಸ್ಟರ್ ಮಟ್ಟದ ಕಿಚನ್ ವ್ಯವಸ್ಥೆ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಹನುಮಕ್ಕ, ಎಂ.ನಾರಾಯಣ, ರೂಪಾ, ಸುನೀತಾ, ಶಾರದಮ್ಮ, ಸೂರ್ಯಕಲಾ ಇದ್ದರು. 
ಶಿವಮೊಗ್ಗ

ಬಿಸಿಯೂಟದಲ್ಲಿ ಕ್ಲಸ್ಟರ್‌ಮಟ್ಟದ ವ್ಯವಸ್ಥೆ ತರಬೇಡಿ cluster level

ಶಿವಮೊಗ್ಗ: ಕ್ಲಸ್ಟರ್ ಮಟ್ಟದಲ್ಲಿ ಬಿಸಿಯೂಟ ತಯಾರಿಕೆ ವ್ಯವಸ್ಥೆಯನ್ನು ರೂಪಿಸುವ ಬದಲು ಬಿಸಿಯೂಟ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ವಹಿಸಬೇಕೆಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ತಯಾರಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಕ್ಲಸ್ಟರ್ ಮಟ್ಟದಲ್ಲಿ ಬಿಸಿಯೂಟ ತಯಾರಿಕೆ ವ್ಯವಸ್ಥೆಯನ್ನು ರೂಪಿಸುವ ಬದಲು ಬಿಸಿಯೂಟ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ವಹಿಸಬೇಕೆಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ತಯಾರಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಹಾವೀರ ವೃತ್ತದಿಂದ ಜಿಪಂ ಆವರಣದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ಸಿಬ್ಬಂದಿ ಪ್ರತಿಭಟನೆ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿಸಿದರು. ಬಿಸಿಯೂಟ ತಯಾರಕರ ಜಿಲ್ಲಾ ಸಂಘದ ಅಧ್ಯಕ್ಷೆ ಹನುಮಕ್ಕ ಮಾತನಾಡಿ, ಬಿಸಿಯೂಟ ತಯಾರಿ, ವಿತರಣೆ ಸೇರಿ ಎಲ್ಲ ಕೆಲಸಗಳನ್ನು ಅಡುಗೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಆದರೂ ಅವರಿಗೆ ಸೂಕ್ತ ವೇತನ, ಸೌಲಭ್ಯ ಸಿಗುತ್ತಿಲ್ಲ. ಬಿಸಿಯೂಟದ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ವಹಿಸಿ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಮುಖ್ಯ ಅಡುಗೆಯವರು ಹಾಗೂ ಎಸ್‌ಡಿಎಂಸಿ ಜಂಟಿ ಖಾತೆ ಮೂಲಕ ಯೋಜನೆ ನಿರ್ವಹಿಸಲು ಅವಕಾಶ ನೀಡಬೇಕು. ಅಡುಗೆ ತಯಾರಿಕಾ ಸಿಬ್ಬಂದಿ ಪೈಕಿಯೇ ಎಸ್‌ಎಸ್‌ಎಲ್‌ಸಿ, ಪಿಯು ಹಾಗೂ ಪದವೀಧರರಿದ್ದು, ಯೋಜನೆ ನಿರ್ವಹಿಸುವ ಅರ್ಹತೆ ಮತ್ತು ಅನುಭವ ಹೊಂದಿದ್ದಾರೆ ಎಂದರು.

ಬಿಸಿಯೂಟ ತಯಾರಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸುನೀತಾ, ಖಜಾಂಚಿ ಸೂರ್ಯಕಲಾ, ಸಿಐಟಿಯು ಜಿಲ್ಲಾ ಸಂಚಾಲಕ ಎಂ.ನಾರಾಯಣ, ಮೀನಮ್ಮ, ರೂಪಾ, ಶಾರದಮ್ಮ, ದಾನಮ್ಮ, ಭಾಗ್ಯಮ್ಮ, ಚಂದ್ರಮ್ಮ, ಗೀತಾ, ಮಮತಾ ಇತರರಿದ್ದರು.