ಸೊರಬ ತಾಲೂಕಿನ ಬಸ್ತಿಕೊಪ್ಪ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಲ್ಲಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಚಂದ್ರಗುತ್ತಿ ಪಿಡಿಒ ನಾರಾಯಣಸ್ವಾಮಿಗೆ ಮನವಿ ಸಲ್ಲಿಸಿದರು. ರಘುಪತಿ, ಎಸ್.ಮಂಜುನಾಥ, ಕೆರಿಯಮ್ಮ, ಬಿ.ಸಲೀಮಾ ಇತರರಿದ್ದರು.
ಸೊರಬ: ತಾಲೂಕಿನ ಬಸ್ತಿಕೊಪ್ಪ ಗ್ರಾಮದ ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿ ಗಣಿಗಾರಿಕೆಗೆ ಪರವಾನಗಿ ನವೀಕರಣ ಮಾಡಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ಪಿಡಿಒ ನಾರಾಯಣಸ್ವಾಮಿಗೆ ಮನವಿ ಸಲ್ಲಿಸಿದರು.
ಸರ್ವೇ ನಂ.24ರ ಎರಡು ಎಕರೆ ಸರ್ಕಾರಿ ಭೂಮಿಯಲ್ಲಿ ಕ್ವಾರಿ ನಡೆಸಲು ಸರ್ಕಾರದಿಂದ ಪರವಾನಗಿ ಪಡೆಯಲಾಗಿದೆ. ಇದರ ಅವಧಿ 2016ರ ಡಿಸೆಂಬರ್‌ಗೆ ಮುಕ್ತಾಯವಾಗಿದೆ. ಈಗ ಗ್ರಾಮವು ನವ ಗ್ರಾಮವಾಗಿ ಬೆಳೆಯುತ್ತಿದೆ. ಅಲ್ಲಿ ಸಾರ್ವಜನಿಕ ಆಸ್ಪತ್ರೆ, ಗ್ರಾಮ ಪಂಚಾಯಿತಿ, ಶಾಲೆ, ವಸತಿ ನಿಲಯ, ಚಂದ್ರಗುತ್ತಿ ದೇವಾಲಯದ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ದೂರಿದರು.
ಜನವಸತಿ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಿದರೆ ವಾಯು, ಶಬ್ಧ ಮಾಲಿನ್ಯ ಉಂಟಾಗುತ್ತದೆ. ಹಾಗಾಗಿ ಕ್ವಾರಿಯನ್ನು ಬಂದ್ ಮಾಡಬೇಕು. ಈಗಾಗಲೇ ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಈ ಮೂಲಕ ಗ್ರಾಮವನ್ನು ಅಭಿವೃದ್ಧಿ ಮಾಡಬೇಕು. ಒಂದುವೇಳೆ ಪರವಾನಗಿ ಮುಂದುವರಿಸಿದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ರಘುಪತಿ, ಅಜೀಮ್, ಎಸ್.ಮಂಜುನಾಥ, ಕಾರ್ತಿಕ, ಡಿ.ಮಂಜುನಾಥ್, ಪಿ.ಮಂಜುನಾಥ್, ರಾಮಕೃಷ್ಣ, ಮಧುಕರ, ದಯಾನಂದ, ಕೃಷ್ಣ, ಪ್ರವೀಣ್, ಪ್ರಶಾಂತ್, ರಾಜು, ನಾಗರಾಜ್, ದರ್ಶನ್, ಮೋಹನ್, ಗಣಪತಿ, ಲಕ್ಷ್ಮಣ್, ಕೆರಿಯಮ್ಮ, ಬಿ.ಸಲೀಮಾ, ಭಾರತಿ ಇತರರಿದ್ದರು.