ಹೊಸನಗರ ತಾಲೂಕಿನ ವಾರಂಬಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ವಿನಾಯಕ ಪ್ರಭು, ಪ್ರಕಾಶ್ ಗೊರದಳ್ಳಿ, ನಾಗರಾಜ್ ಆಚಾರ್ ಇತರರಿದ್ದರು. 
ಶಿವಮೊಗ್ಗ

ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಹೊಸನಗರ: ದೇವಸ್ಥಾನಗಳು ಧಾರ್ಮಿಕ ಕೇಂದ್ರದ ಜತೆ ಸಾಮಾಜಿಕ ಕೇಂದ್ರವಾಗಬೇಕು ಎಂದು ವಾರಂಬಳ್ಳಿ ಶ್ರೀ ಕಲ್ಯಾಣೇಶ್ವರ ದೇವಸ್ಥಾನ ಕಾರ್ಯದರ್ಶಿ ವಿನಾಯಕ ಪ್ರಭು ಹೇಳಿದರು.
ತಾಲೂಕಿನ ವಾರಂಬಳ್ಳಿಯಲ್ಲಿ ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಲು ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಗೊರದಳ್ಳಿ ಮಾತನಾಡಿ, ಶಾಲೆಗೆ ಪ್ರತಿ ವರ್ಷ ಅನೇಕ ದಾನಿಗಳು ಕಲಿಕಾ ಸಾಮಗ್ರಿ, ಶಾಲೆಗೆ ಅವಶ್ಯ ಇರುವ ಎಲ್ಲ ವಸ್ತುಗಳನ್ನು ನೀಡುತ್ತಿದ್ದಾರೆ ಎಂದರು. ದಾನಿಗಳ ಸಹಕಾರದಿಂದ ವಾರಂಬಳ್ಳಿ ಕಲ್ಯಾಣೇಶ್ವರ ದೇವಸ್ಥಾನದ ಆಶ್ರಯದಲ್ಲಿ ಈ ವರ್ಷ 5 ಶಾಲೆಗಳಿಗೆ ಕಲಿಕಾ ಸಾಮಗ್ರಿ, 100 ಬ್ಯಾಗ್‌ಗಳನ್ನ ವಿತರಿಸಲಾಗಿದೆ.
ಮುಖ್ಯಶಿಕ್ಷಕ ಮಲ್ಡೃಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷೆ ತಾರಾ ಗಿರೀಶ್, ನಾಗರಾಜ್ ಆಚಾರ್, ಶಿಕ್ಷಕಿ ದೀಪಾ, ಸುಭದ್ರಾಬಾಯಿ ಇತರರಿದ್ದರು.