ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಮಹಮ್ಮದ್ ಷರೀಫ್, ಅನಿಲ್‌ಕುಮಾರ್, ಡಾ.ಗಣೇಶ್ ಕೆಂಚನಾಲ ಇತರರಿದ್ದರು. 
ಶಿವಮೊಗ್ಗ

ಧರ್ಮಸ್ಥಳ ಸಂಘದಿಂದ ಆರ್ಥಿಕ ಪರಿಸ್ಥಿತಿ ಉತ್ತಮ

ರಿಪ್ಪನ್‌ಪೇಟೆ: ಧರ್ಮಸ್ಥಳ ಸಂಘಗಳು ಗ್ರಾಮಗಳಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಗ್ರಾಮೀಣ ಪ್ರದೇಶದ ಜನರು ಅಭಿವೃದ್ಧಿ ವಿಚಾರದಲ್ಲಿ ಜಾಗೃತರಾಗಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೆಂಚನಾಲದಲ್ಲಿ ಜರುಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಮತ್ತು ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಣ್ಣ ಉಳಿತಾಯ ಮತ್ತು ಸಾಲವು ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳಿಸಿದೆ. ಮದ್ಯವರ್ಜನ ಶಿಬಿರಗಳಿಂದ ನೆಮ್ಮದಿ ಕುಟುಂಬ ನಿರ್ಮಾಣ ಆಗುತ್ತಿದೆ. ಜನರ ಉದ್ದೇಶಿತ ವ್ಯವಹಾರ ನಡೆಸಲು ಆರ್ಥಿಕ ಸಾಲ ಸಹಕಾರಿಯಾಗಿದೆ. ಕೆರೆಗಳ ಪುನಶ್ಚೇತನದೊಂದಿಗೆ ಜಲಸಂರಕ್ಷಣಾ ಕಾರ್ಯ ನಡೆಯುತ್ತಿದೆ ಎಂದರು.
ಕೆಂಚನಾಲ ಗ್ರಾಪಂ ಅಧ್ಯಕ್ಷ ಮಹಮ್ಮದ್ ಷರ್ೀ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಆಕಾಶವಾಣಿ ಕಲಾವಿದ ಡಾ. ಗಣೇಶ್ ಕೆಂಚನಾಲ, ಯೋಜನಾ ಟ್ರಸ್ಟಿ ಮುರಳಿಧರ ಶೆಟ್ಟಿ, ಯೋಜನಾಧಿಕಾರಿ ಆರ್.ಪ್ರದೀಪ್, ವೀರೇಶ್ ಆಲುವಳ್ಳಿ, ಉಬೇದುಲ್ಲಾ ಶರ್ೀ, ಬಸವರಾಜ, ವೇದಾಕ್ಷಿ, ಪುಟ್ಟಮ್ಮ ಇತರರಿದ್ದರು.