ಸಾಗರದಲ್ಲಿ ಆಯೋಜಿಸಿದ್ದ ಸ್ವರ ಸಂಗಮ ಕಾರ್ಯಕ್ರಮದಲ್ಲಿ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 
ಶಿವಮೊಗ್ಗ

ಕಲಾವಿದನಿಗೆ ಶ್ರದ್ಧೆ ಬಹಳ ಮುಖ್ಯ | music programme

ಸಾಗರ: ಕಲಾವಿದನಿಗೆ ಶ್ರದ್ಧೆ ಬಹಳ ಮುಖ್ಯ. ತನಗೆ ವಿದ್ಯೆ ಕಲಿಸಿದ ಗುರುವಿನ ಎದುರು ಬೆಳೆದು ಉತ್ತಮ ಕಾರ್ಯಕ್ರಮ ನೀಡುವಂತಾಗುವುದೇ ನಿಜವಾದ ಗುರು ಕಾಣಿಕೆ ಎಂದು ಬೆಂಗಳೂರಿನ ಖ್ಯಾತ ಹಾರ್ಮೋನಿಯಂ ಕಲಾವಿದ ಡಾ. ರವೀಂದ್ರ ಕಾಟೋಟಿ ಹೇಳಿದರು.
ಸಾಗರದಲ್ಲಿ ಸ್ವರಸಿರಿ ಹಿಂದುಸ್ತಾನಿ ಸಂಗೀತ ವಿದ್ಯಾಲಯ ಆಯೋಜಿಸಿದ್ದ 5ನೇ ವರ್ಷದ ಸ್ವರ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಕಲಿತು ಬೇರೆ ಕಡೆ ಎಲ್ಲಿಯೋ ಕಾರ್ಯಕ್ರಮ ನೀಡುವುದು ಅಥವಾ ಕಲಿಸುವುದು ಸಾಮಾನ್ಯ. ಆದರೆ ಗುರುವಿರುವ ಸ್ಥಳದಲ್ಲಿಯೇ ಶಿಷ್ಯರು ಹಿರಿಮೆ ತೋರುವುದು ಅಪರೂಪ. ಇದಕ್ಕೆ ಸಾಗರ ತಾಲೂಕು ಅಪವಾದ. ಇಲ್ಲಿ ಹಿಂದುಸ್ತಾನಿ ಸಂಗೀತ ಕಲಿತು ಈಗ ತಾವು ತರಗತಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ನಾಲ್ಕು ತಲೆಮಾರಿನ ಕಲಾವಿದರ ಸಂಗಮ ಇಲ್ಲಿದೆ. ಇದು ಕಲೆಯ ಉತ್ಕರ್ಷವನ್ನು ತಿಳಿಸುತ್ತದೆ ಎಂದು ತಿಳಿಸಿದರು.
ವಿದುಷಿ ವಸುಧಾ ಶರ್ಮ, ತಬಲ ಗುರು ಪಂಡಿತ್ ಮೋಹನ ಹೆಗಡೆ ಹುಣಸೆಕೊಪ್ಪ, ಸ್ವರಸಿರಿ ಪ್ರಾಧ್ಯಾಪಕಿ ಸುಜಾತಾ ಅಶೋಕ, ಮಂಗಲಾ ಗಿರೀಶ್, ಮಹಾಲಕ್ಷ್ಮೀ ಸುದರ್ಶನ ಮತ್ತಿತರರು ಇದ್ದರು.
ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, ಸುಬೋಧ್ ಪಿ. ರಾವ್ ಬಾನ್ಸುರಿ ವಾದನ, ಸುಜಾತಾ ಅಶೋಕ ಅವರ ಹಿಂದುಸ್ತಾನಿ ಸಂಗೀತ ಹಾಗೂ ವಸುಧಾ ಶರ್ಮ ಅವರಿಂದ ಗಾಯನ ನಡೆಯಿತು. ಗುರುರಾಜ್ ಆಡುಕಳ, ಅಜಯ ಹೆಗಡೆ ಶಿರಸಿ, ವಿನಾಯಕ ಸಾಗರ್, ಶ್ರೀರಂಜಿನಿ ಅವರಿಂದ ಗಾಯನ, ಶ್ರೀಹರಿ ಪ್ರಸಾದ್, ಶ್ರೀನಂದ, ಶ್ರೀವತ್ಸ, ಅಮಾತ್ಯ ಅವರಿಂದ ವಾದ್ಯ ನಾದ ವೈವಿಧ್ಯ ಕಾರ್ಯಕ್ರಮ ಜರುಗಿತು.