ಸಾಗರ ತಾಲೂಕು ತುಂಬೆ ಬೆಂಕಟವಳ್ಳಿಯಲ್ಲಿ ಶ್ರೀರಾಮೇಶ್ವರ ದೇವರ ಪ್ರತಿಷ್ಠಾಪನೆಯನ್ನು ಶ್ರೀರಾವೇಶ್ವರ ಭಾರತೀ ಸ್ವಾಮೀಜಿ ನೆರವೇರಿಸಿದರು. ಪ್ರಖ್ಯಾತ ಸುಬ್ಬರಾವ್​, ವೇ.ಮೂ. ಸಮರ್ಥಭಟ್​, ಎಸ್​.ಪಿ. ಶೇಷಗಿರಿ ಭಟ್​ ಇತರರಿದ್ದರು. 
ಶಿವಮೊಗ್ಗ

ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯೊಂದೇ ಮಾರ್ಗ

ಟಿ.ಎಚ್.ಸಂತೋಷ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ರಾಮೇಶ್ವರ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ
  • ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಆಶಯ
  • ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯೊಂದೇ ಮಾರ್ಗ
ಸಾಗರ: ಒಗ್ಗಟ್ಟು ಮತ್ತು ಶ್ರದ್ಧೆ ಇದ್ದರೆ ಎಂತಹ ಅದ್ಭುತ ಕೆಲಸವನ್ನಾದರೂ ಮಾಡಬಹುದು ಎಂಬುದಕ್ಕೆ ತುಂಬೆ ಗ್ರಾಮದಲ್ಲಿ ಉದ್ಘಾಟನೆ ಆಗುತ್ತಿರುವ ದೇಗುಲವೇ ನಿದರ್ಶನ ಎಂದು ರಾಮಚಂದ್ರಾಪುರ ಮಠದ ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸಾಗರ ತಾಲೂಕಿನ ತುಂಬೆ ಬೆಂಕಟವಳ್ಳಿಯ ರಾಮೇಶ್ವರ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ನಿರ್ಮಿಸಿರುವ ರಾಮೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ, ಧರ್ಮಸಭೆಯಲ್ಲಿ ಸೋಮವಾರ ಆಶೀರ್ವಚನ ನೀಡಿದರು.
ಹಣದಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ದೇವರಿಗೆ ಬೇಕಿರುವ ಭಕ್ತಿಯಿಂದ ಮಾತ್ರ ಸಾನ್ನಿಧ್ಯವನ್ನು ಉಳಿಸಿಕೊಳ್ಳಬಹುದು. ಭಗವಂತನ ಸಾಾತ್ಕಾರಕ್ಕೆ ಭಕ್ತಿಯೊಂದೇ ಮಾಗೋರ್ಪಾಯ ಎಂದರು.
ರಾಮೇಶ್ವರ ದೇವರ ಜೀವಕುಂಭಾಭಿಷೇಕ ಪೂರ್ವಕ ಪ್ರತಿಷ್ಠೆಯನ್ನು ಶ್ರೀಗಳು ನೆರವೇರಿಸಿದರು. ಶ್ರೀ ರಾಮೇಶ್ವರ ಸೇವಾ ಪ್ರತಿಷ್ಠಾನದ ಅಧ್ಯ ಪ್ರಖ್ಯಾತ ಸುಬ್ಬರಾವ್​ ತುಂಬೆ, ಪ್ರಧಾನ ತಂತ್ರಿಗಳಾದ ವೇ.ಮೂ. ಸಮರ್ಥ ಭಟ್​, ಸಿಗಂದೂರು ೇತ್ರದ ಪ್ರಧಾನ ಅರ್ಚಕ ಎಸ್​.ಪಿ. ಶೇಷಗಿರಿ ಭಟ್​, ವರದಹಳ್ಳಿ ಶ್ರೀ ದುರ್ಗಾಂಬಾ ದೇವಸ್ಥಾನದ ಪ್ರಧಾನ ಅರ್ಚಕ ವಿ.ಶ್ರೀಧರ ಭಟ್​, ವರದಾಪುರ ಶ್ರೀಧರ ಸೇವಾ ಮಹಾಮಂಡಲದ ಅಧ್ಯ ಎಂ.ಜಿ.ಕೃಷ್ಣಮೂರ್ತಿ, ಅರುಣ್​ ಬೆಂಕಟವಳ್ಳಿ ಇತರರಿದ್ದರು.
ಊರಿನಲ್ಲಿ ಮನೆ ಎಷ್ಟಿವೆ ಎನ್ನುವುದಕ್ಕಿಂತ ಇರುವವರ ಮನಸ್ಸು ಹೇಗಿದೆ ಎನ್ನುವುದು ಮುಖ್ಯವಾಗಲಿದೆ. ಹಾಗಾಗಿಯೇ ಇಲ್ಲಿ ದೇವಸ್ಥಾನವೊಂದನ್ನು ಉತ್ತಮ ರೀತಿ ಕಟ್ಟುವ ಮೂಲಕ ಕಾಯಕದ ಶ್ರದ್ಧೆ ತೋರಿದ್ದಾರೆ. ಹೀಗೆ ಸುಂದರವಾಗಿರುವ, ವಾಸ್ತು ಪ್ರಕಾರವಾಗಿರುವ ದೇವಸ್ಥಾನದಲ್ಲಿ ಊರ ಜನರ ಭಕ್ತಿಯ ಸಂಗಮವೂ ಆಗಿರುವುದು ಶ್ರೇಯಸ್ಸಿಗೆ ಕಾರಣವಾಗಿದೆ.
> ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ