ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ನಿರ್ವಹಣಾ ಕ್ಷೇತ್ರದ ‘ಉತ್ಥಾನ-2026’ ದಶಮಾನೋತ್ಸವ ಸಂಭ್ರಮವನ್ನು ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಉದ್ಘಾಟಿಸಿದರು. ಡಿ.ಜಿ.ರಮೇಶ್, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಡಾ. ಎಸ್.ವಿ.ಸತ್ಯನಾರಾಯಣ, ಡಾ. ಶ್ರೀಕಾಂತ್, ಡಾ. ಸಂತೋಷ್ ಶಾನಭಾಗ್, ಡಾ. ವೈ.ವಿಜಯಕುಮಾರ್ ಇದ್ದರು. 
ಶಿವಮೊಗ್ಗ

ವಾಸ್ತವತೆ ವಿಮರ್ಶಿಸುವ ಗುಣ ಬೆಳೆಸಿಕೊಳ್ಳಿ | Utthana programme

ನವೀನ ಬಿ.ಎಂ

ಪ್ರಮುಖ ಮುಖ್ಯಾಂಶಗಳು

  • ಯುವ ಸಮೂಹದ ಮೇಲಿದೆ ಸಂಸ್ಕೃತಿ, ಸಂಸ್ಕಾರ ತಲುಪಿಸುವ ಜವಾಬ್ದಾರಿ
  • ಎಂಬಿಎ ವಿಭಾಗದಿಂದ ಉತ್ಥಾನ-2026 ಕಾರ್ಯಕ್ರಮ
  • ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಸಲಹೆ
ಶಿವಮೊಗ್ಗ: ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಭವಿಷ್ಯದ ಪೀಳಿಗೆಯ ರಾಯಭಾರಿ(Ambassador)ಗಳಾದ ಯುವ ಸಮೂಹದ ಮೇಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಎಂಬಿಎ ವಿಭಾಗದಿಂದ ಸಾಂಸ್ಕೃತಿಕ ಮತ್ತು ನಿರ್ವಹಣಾ ಕ್ಷೇತ್ರದ ‘ಉತ್ಥಾನ-2026(Utthana)’ ದಶಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಸುತ್ತಮುತ್ತ ವಾತಾವರಣದಲ್ಲಿರುವ ವಾಸ್ತವತೆಯನ್ನು ವಿಮರ್ಶಿಸುವ ಕುತೂಹಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗ(Competitive era)ದಲ್ಲಿ ಪ್ರತಿಯೊಂದು ವಿಷಯಗಳ ಬಗ್ಗೆ ಕುತೂಹಲ ಮೂಡಿಸಿಕೊಳ್ಳಬೇಕು ಎಂದರು.
ನಮ್ಮ ಸಂಸ್ಕೃತಿ(Culture)ಯನ್ನು ಎಂದಿಗೂ ಮರೆಯಬಾರದು. ನಾವು ಮರೆತಿದ್ದ ಸೌದೆ ಒಲೆಗಳು ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾಗಿಯೇ ಯಾವ ವಿಚಾರಗಳ ಬಗ್ಗೆಯು ತಾತ್ಸಾರ ಬೇಡ. ವ್ಯಕ್ತಿಯ ದುರ್ಬಲ ಮನಸ್ಥಿತಿ, ಆತನನ್ನೇ ಹಾಳು ಮಾಡುತ್ತದೆ. ಓದುವುದು(Read), ಬರೆಯುವುದನ್ನು ಕಲಿಸುವುದಷ್ಟೇ ವಿದ್ಯಾಭ್ಯಾಸವಲ್ಲ. ಇದರ ಜತೆಗೆ ವಿನಯ, ವಿವೇಕ ಕಲಿಸುವುದೇ ನಿಜವಾದ ಶಿಕ್ಷಣ(Education) ಎಂದು ತಿಳಿಸಿದರು.
ದೃಷ್ಟಿ ಸರಿಯಿದ್ದಾಗ ಮಾತ್ರ, ಸೃಷ್ಟಿ ಸರಿಯಿರುತ್ತದೆ. ವಾದದ ಮಾತಿಗಿಂತ ಸ್ವಾದದ ಮೌನವೇ ಲೇಸು. ಸಂಸ್ಕಾರ ತುಂಬಿದ ಮಾತುಗಳು ನಿಮ್ಮದಾಗಬೇಕಿದೆ. ಸ್ವಸ್ಥ ಮನಸ್ಸಿನ ಬೆಳವಣಿಗೆಗೆ ಇಂತಹ ವೇದಿಕೆಗಳನ್ನು ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್‌ಇಎಸ್ ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಎಚ್.ಸಿ.ಶಿವಕುಮಾರ್, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕ ಡಾ. ಸಂತೋಷ್ ಶಾನಭಾಗ್, ಡಾ. ಪ್ರವೀಣ್‌ಕುಮಾರ್, ಉಪನ್ಯಾಸಕರಾದ ಡಾ.ಪಿ.ಎಸ್.ಸುಭದ್ರಾ, ಡಾ. ವಿ.ವಿಕ್ರಮ್ ಉಪಸ್ಥಿತರಿದ್ದರು.

700ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಕಾರ್ಯಕ್ರಮದಲ್ಲಿ ಬ್ಯುಸಿನೆಸ್ ಪ್ಲಾನ್(Business plan), ಬೆಸ್ಟ್ ಮ್ಯಾನೇಜರ್, ಬ್ಯುಸಿನೆಸ್ ಕ್ವಿಜ್, ಸ್ಟಾಕ್ ಮಾರ್ಕೆಟ್, ಚಿತ್ರಕಲೆ, ಸಮೂಹ ನೃತ್ಯ, ಬೆಂಕಿ ರಹಿತ ಅಡುಗೆ, ಪ್ರೇಮಗೀತೆಗಳ ಗಾಯನ, ವಾಲಿಬಾಲ್, ಥ್ರೋಬಾಲ್, ಚೆಸ್, ಇ-ಸ್ಪೋರ್ಟ್ಸ್(E-Sports) ಸೇರಿ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳಲ್ಲಿ 15 ಪದವಿ ಕಾಲೇಜುಗಳ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.