ಶಿಕಾರಿಪುರದ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ೆರಂ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಜಿ.ಎಸ್.ಶಿವಕುಮಾರ್, ಡಾ. ರವೀಂದ್ರ, ಡಾ. ಎಂ.ವೀರೇಂದ್ರ ಮತ್ತಿತರರಿದ್ದರು.
ಶಿಕಾರಿಪುರ: ನಿರಂತರ ಪರಿಶ್ರಮವಹಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಹೇಳಿದರು.
ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ೆರಂ ಉದ್ಘಾಟಿಸಿ ಮಾತನಾಡಿ, ಅಭ್ಯಾಸದಿಂದ ಜ್ಞಾನ ಕೌಶಲ ವೃದ್ಧಿಸುತ್ತದೆ. ಉದ್ಯೋಗ ಸೃಷ್ಟಿಸುವ ಕೌಶಲ ನಮ್ಮದಾಗಬೇಕು ಎಂದು ತಿಳಿಸಿದರು.
ಕುಮದ್ವತಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ರವೀಂದ್ರ ಮಾತನಾಡಿ, ವಾಣಿಜ್ಯ ವಿಭಾಗವು ಜಗತ್ತಿನಲ್ಲಿ ಬಹುದೊಡ್ಡ ಕ್ಷೇತ್ರ ಆಗಿದ್ದು, ವಿದ್ಯಾರ್ಥಿ 35 ವಿಷಯಗಳ ಅಧ್ಯಯನ ನಡೆಸಿ ಉದ್ಯೋಗ ಸೃಷ್ಟಿಸುವ ಕೌಶಲ ಹೊಂದುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಪರ ಕೋರ್ಸ್‌ಗಳ ಪರಿಪೂರ್ಣ ಮಾಹಿತಿ ಹೊಂದಬೇಕು ಎಂದರು.
ಡಾ. ಎಂ.ವೀರೇಂದ್ರ ಮಾತನಾಡಿ, ಮಕ್ಕಳಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸಂಸ್ಥೆಯು ಒದಗಿಸುತ್ತದೆ. ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನ ಅನುಸರಿಸಬೇಕು ಎಂದು ತಿಳಿಸಿದರು. ಉಪನ್ಯಾಸಕ ಚಂದ್ರಶೇಖರ್, ನಳಿನಾ ಪಾಟೀಲ್, ದೇವರಾಜ್, ಬೋಧಕರು, ಸಿಬ್ಬಂದಿ ಇದ್ದರು.