ಹೆಗ್ಗೋಡಿನ ರೂಪಶ್ರೀ ಕಾಲೇಜಿನಲ್ಲಿ ಆಯೋಜಿಸಿದ್ದ ಆಹಾರ ಮೇಳದ ಮಳಿಗೆಗಳನ್ನು ಗಣ್ಯರು ವೀಸಿದರು. ಗಣೇಶ್, ಕೇಶವ ಸಂಪೆಕೈ, ಶ್ರೀಕಾಂತ್, ನಾಗರಾಜ್ ಸಭಾಹಿತ್, ಸತ್ಯನಾರಾಯಣ ಬಾಗಿ ಇದ್ದರು.
ತ್ಯಾಗರ್ತಿ: ಮಕ್ಕಳಿಗೆ ಕಲಿಕಾ ಹಂತದಲ್ಲಿ ಉದ್ಯಮಶೀಲತೆ ವ್ಯಾಪಾರಿ ಮನೋಭಾವನೆ ಬೆಳೆಸಿದರೆ ಮುಂದೆ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಕರ್ನಾಟಕ ಬ್ಯಾಂಕ್ ಹೆಗ್ಗೋಡು ಶಾಖಾ ವ್ಯವಸ್ಥಾಪಕ ಗಣೇಶ ಹೇಳಿದರು.
ಹೆಗ್ಗೋಡಿನ ವಿಸಂ ವಿದ್ಯಾ ಸಂಸ್ಥೆಯ ಎಸ್.ರೂಪಶ್ರೀ ಪದವಿಪೂರ್ವ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂರ್ಜಸ್ ಟಕದಿಂದ ಹೊಸವರ್ಷದ ಸ್ವಾಗತ ಹಾಗೂ ವಿದ್ಯಾರ್ಥಿಗಳ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜು ಹಂತದಲ್ಲಿ ಆಹಾರ ಮೇಳ ನಡೆಸುವುದರಿಂದ ತಯಾರಿಕೆಯ ಶ್ರಮ, ಅದರ ವೆಚ್ಚಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ತಿಳಿವಳಿಕೆ ಪಡೆಯಲು ಸಾಧ್ಯ ಎಂದರು.
ವಿಸಂ ವಿದ್ಯಾಸಂಸ್ಥೆ ಅಧ್ಯ ಕೇಶವ ಸಂಪೆಕೈ, ಕರ್ಣಾಟಕ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಶ್ರೀಕಾಂತ್, ಪ್ರಮುಖರಾದ ಸತ್ಯನಾರಾಯಣ ಬಾಗಿ, ನಾಗರಾಜ್ ಸಭಾಹಿತ್, ವಿಠ್ಠಲ ಪೈ, ಎಂ.ಎಸ್.ನಾಗರಾಜ್, ಕಾಲೇಜು ಪ್ರಾಚಾರ್ಯ ತಿಮ್ಮಪ್ಪ ಇದ್ದರು.
ವಿದ್ಯಾರ್ಥಿಗಳು 21 ಮಳಿಗೆಯಲ್ಲಿ 50ಕ್ಕೂ ಹೆಚ್ಚು ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಿ, ಮನೆಯಲ್ಲಿ ಬೆಳೆದ ಸೊಪ್ಪು, ತರಕಾರಿಗಳನ್ನು ಮಾರಾಟ ಮಾಡಿದರು.