ಸೊರಬದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಕ್ಷ್ಮೀ ವ್ರತ ಪುಸ್ತಕವನ್ನು ಹಾಡಗೇರಿ ಗೇರುಸೊಪ್ಪದ ಶ್ರೀ ಸಾಯಿಮುನಿ ಸ್ವಾಮೀಜಿ ಬಿಡುಗಡೆಗೊಳಿಸಿದರು. ಸೀತಾರಾಮ ಖಾರ್ವಿ, ಸತೀಶ್ ಕೆ.ಆಚಾರ್, ಗಣಪತಿ ಮೇಸ್ತ ಇತರರಿದ್ದರು. 
ಶಿವಮೊಗ್ಗ

ಸಮಾಜಮುಖಿ ಮನೋಭಾವ ಬೆಳೆಸಿಕೊಳ್ಳಿ

ಸೋಮಶೇಖರ ಎನ್
ಸೊರಬ: ಪುಸ್ತಕಗಳು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸುವ ಜತೆ ಜ್ಞಾನ ವೃದ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಹಾಡಗೇರಿ ಗೇರುಸೊಪ್ಪದ ಶ್ರೀ ಸಾಯಿಮುನಿ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಖಾರ್ವಿ ಫೌಂಡೇಷನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಲಕ್ಷ್ಮೀವೃತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ಕೊಡುಗೆ ನೀಡುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸಮಾನ ಮನಸ್ಕರು ಒಗ್ಗೂಡಿ ಖಾರ್ವಿ ಫೌಂಡೇಷನ್ ಟ್ರಸ್ಟ್ ಆರಂಭಿಸಿರುವುದು ಉತ್ತಮ ಕಾರ್ಯ. ಲಕ್ಷ್ಮೀ ವ್ರತ ಸರ್ವ ಸಮಾಜದವರಿಗೂ ವ್ರತದ ನಿಯಮಗಳ ಮಹತ್ವ ಹೇಳುವಂತದ್ದಾಗಿದೆ ಎಂದು ತಿಳಿಸಿದರು.
ಖಾರ್ವಿ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಖಾರ್ವಿ, ಸಾಗರ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಸತೀಶ್ ಆಚಾರ್, ಅಮಿತ್ ರಾಜ್, ಮಾಜಿ ಸೈನಿಕ ಗಣಪತಿ ಮೇಸ್ತ ಸಿದ್ದಾಪುರ, ಟ್ರಸ್ಟ್ ಉಪಾಧ್ಯಕ್ಷ ಹನುಮೇಶ್, ಖಜಾಂಚಿ ಅನಿಲ್‌ಕುಮಾರ್, ಕಾರ್ಯದರ್ಶಿ ಮಹೇಶ್ ಖಾರ್ವಿ, ನಿರ್ದೇಶಕರು ಇದ್ದರು.