ಶಿವಮೊಗ್ಗ ಎಸ್‌ಪಿ ಬಿ.ನಿಖಿಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಶಿವಮೊಗ್ಗ

ಈದ್ ಮಿಲಾದ್ ಹಿನ್ನೆಲೆ 3 ಸಾವಿರ ಪೊಲೀಸರ ನಿಯೋಜನೆ | Eid Milad

ಪ್ರಮುಖ ಮುಖ್ಯಾಂಶಗಳು

  • ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆ
  • ಜಿಲ್ಲೆಗೆ 12 ಕೆಎಸ್‌ಆರ್‌ಪಿ, 1 ಆರ್‌ಎಎಫ್, 1 ಎಸ್‌ಐಆರ್ ತುಕುಡಿ
  • ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಬಿ.ನಿಖಿಲ್ ಮಾಹಿತಿ
ಶಿವಮೊಗ್ಗ: ಈದ್ ಮಿಲಾದ್ ಹಬ್ಬ(Eid Milad festival)ದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಸುಮಾರು 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಸ್‌ಪಿ ಬಿ.ನಿಖಿಲ್ ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ 12 ಕೆಎಸ್‌ಆರ್‌ಪಿ(KSRP) ತುಕುಡಿಗಳು, ಒಂದು ಆರ್‌ಎಎಫ್(RAF) ತುಕುಡಿ ಹಾಗೂ ಒಂದು ಎಸ್‌ಐಆರ್(SIR) ತುಕುಡಿಯನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ. ಇದರ ಜತೆಗೆ 21 ಡಿಎಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಬ್ಬದ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ಶಾಂತಿ ಸಭೆಗಳನ್ನು ನಡೆಸಿದ್ದು, ಪೊಲೀಸ್ ಇಲಾಖೆ(Police Department)ಯಿಂದ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. ಮಸೀದಿ ಹಾಗೂ ವಿವಿಧ ಸಮಿತಿ ಮುಖಂಡರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗಿದೆ. ಅಗತ್ಯ ಸೂಚನೆಗಳು ಮತ್ತು ಮಾರ್ಗಸೂಚಿಗಳ ಪಾಲನೆಗೂ ಆದೇಶ ನೀಡಲಾಗಿದೆ ಎಂದರು.
ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಕಂಟ್ರೋಲ್ ಪ್ಲ್ಯಾನ್(Control plan) ಮತ್ತು ಎಕ್ಸೈಸ್ ಪ್ಲ್ಯಾನ್ ಸಿದ್ಧಪಡಿಸಿದ್ದು, ಸುಪ್ರೀಂಕೋರ್ಟ್ ನಿರ್ದೇಶನ(Supreme Court direction)ದಂತೆ ಧ್ವನಿವರ್ಧಕಗಳ ಡೆಸಿಬಲ್ ಮಿತಿ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಈ ಕುರಿತು ಹೊರಡಿಸಿರುವ ಎಲ್ಲ ಆದೇಶಗಳನ್ನು ಮಸೀದಿ ಹಾಗೂ ಸಮಿತಿ ಮುಖಂಡರಿಗೆ ತಲುಪಿಸಲಾಗಿದೆ. ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ ಅಥವಾ ಹಬ್ಬದ ಸಂದರ್ಭದಲ್ಲಿ ಇತರೆ ಸಮುದಾಯಗಳಿಗೆ ಧಕ್ಕೆ ತರುವಂತಹ ಹೇಳಿಕೆ, ಕೃತ್ಯ ಅಥವಾ ದ್ವೇಷ ಮೂಡಿಸುವ ಪ್ರಯತ್ನ ಕಂಡುಬಂದರೆ ತಕ್ಷಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
13 ಮಂದಿ ಗಡಿಪಾರು: ಶಾಂತಿ ಮತ್ತು ಸುವ್ಯವಸ್ಥೆ(Peace and order)ಗೆ ಧಕ್ಕೆ ತರಬಹುದಾದವರ ವಿರುದ್ಧ ಈಗಾಗಲೇ 13 ಮಂದಿಯನ್ನು ಗಡಿಪಾರು ಮಾಡಲಾಗಿದೆ. 110ರ ಅಡಿಯಲ್ಲಿ 312 ಮಂದಿ ವಿರುದ್ಧ ಭದ್ರತಾ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಎಸ್‌ಪಿ ನಿಖಿಲ್ ಹೇಳಿದರು. ಹಿಂದಿನ ಪ್ರಕರಣಗಳಲ್ಲಿ ಭಾಗಿಯಾಗಿರುವವರು, ಅನುಮಾನಾಸ್ಪದ ಚಟುವಟಿಕೆ(Suspicious activity)ಗಳಲ್ಲಿ ತೊಡಗಿರುವವರು ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೋಮು ಸೌಹಾರ್ದತೆಗೆ ಧಕ್ಕೆ ತಂದ್ರೆ ಹುಷಾರ್..

ವೈರಲ್ ಆಗಿರುವ ರೀಲ್ಸ್‌ಗಳನ್ನು ಪೊಲೀಸರು ಈಗಾಗಲೇ ಗಮನಿಸಿದ್ದು, ಅವುಗಳ ವಿರುದ್ಧ ಡಿಎಆರ್ ಪ್ರಕ್ರಿಯೆ ಆರಂಭಿಸಿ ಸಂಬಂಧಪಟ್ಟ ವಿಷಯಗಳನ್ನು ಡಿಲೀಟ್ ಮಾಡಿಸುವ ಜತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಯಾರಾದರೂ ಸಾಮಾಜಿಕ ಜಾಲತಾಣ(Social network)ಗಳಲ್ಲಿ ರೀಲ್ಸ್ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಅದರಲ್ಲಿರುವ ವಿಷಯವನ್ನು ಪರಿಶೀಲಿಸಬೇಕು. ದ್ವೇಷ ಅಥವಾ ಕೋಮು ಸೌಹಾರ್ದತೆ(Communal harmony)ಗೆ ಧಕ್ಕೆ ತರುವಂತಹ ವಿಷಯವನ್ನು ಹಂಚಿಕೊಂಡರೆ ಅಂತಹವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಎಚ್ಚರಿಸಿದರು.
"

ಜಿಲ್ಲಾದ್ಯಂತ 36 ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಅಕ್ರಮ ಸಾಗಣೆ ಸೇರಿ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದು, ಈಗಾಗಲೇ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಈದ್ ಹಬ್ಬವನ್ನು ಆಚರಿಸಬೇಕಿದೆ.

— ಬಿ.ನಿಖಿಲ್, ಎಸ್‌ಪಿ