ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆಸುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಸ್ಥರು ಆನವಟ್ಟಿಯಲ್ಲಿ ಪ್ರತಿಭಟನೆ ನಡೆಸಿದರು. ರುದ್ರಪ್ಪ ಕಡ್ಲೇರ್​, ಹೊನ್ನಪ್ಪ, ವಿಜಯೇಂದ್ರ ಗೌಡ, ಸುಭಾಶ್ಚಂದ್ರ, ಮಂಜು ಇತರರಿದ್ದರು. 
ಶಿವಮೊಗ್ಗ

ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಒತ್ತಾಯ

ಟಿ.ಎಚ್.ಸಂತೋಷ್ ಕುಮಾರ್
ವಿಜಯವಾಣಿ ಸುದ್ದಿಜಾಲ ಸೊರಬ/ಆನವಟ್ಟಿ
ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆಸುತ್ತಿರುವ ಗಣಿಗಾರಿಕೆ ವಿರೋಧಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಜಿಲ್ಲಾ ಟಕ, ಎಣ್ಣೆಕೊಪ್ಪ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಆನವಟ್ಟಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಎಣ್ಣೆಕೊಪ್ಪ ಹಾಗೂ ತೆವರತೆಪ್ಪ ಗ್ರಾಮದ ಸರ್ವೇ ನಂ.60 ಹಾಗೂ 128, ಬೆಲವಂತನಕೊಪ್ಪ ಗ್ರಾಮದ ಸರ್ವೇ ನಂ.100ರಲ್ಲಿ ದನದ ಮುಫತ್ತಿಗೆ ಮೀಸಲಿಟ್ಟ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ.
ಕಾನೂನಿನಂತೆ 100 ದನಗಳಿಗೆ 30 ಎಕರೆ ಜಾಗದ ಮೀಸಲಿಡಬೇಕು. ತಾಲೂಕು ಪಶುವೈದ್ಯಾಧಿಕಾರಿ ವರದಿಯಂತೆ ಎಣ್ಣೆಕೊಪ್ಪ ಗ್ರಾಮವೊಂದರಲ್ಲೇ ಸುಮಾರು 498 ಜಾನುವಾರುಗಳಿವೆ. ಇವುಗಳಿಗೆ 150 ಎಕರೆ ಜಾಗದ ಅವಶ್ಯಕತೆಯಿದೆ. ಇದರಲ್ಲಿ ಬಡವರಿಗೆ ಆಶ್ರಯ ನಿವೇಶನ, ಸ್ಮಶಾನಕ್ಕೆ ಜಾಗ ನೀಡಲಾಗಿದೆ. ಇತರೆ ಅಭಿವೃದ್ಧಿ ಕಾರ್ಯಕ್ಕೂ ಇದೇ ಜಾಗದ ಅಗತ್ಯವಿದೆ. ಆದರೆ ಕಾನೂನುಬಾಹಿರವಾಗಿ ದನದ ಮುಫತ್ತಿನಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ದೂರಿದರು.
ಗಣಿಗಾರಿಕೆಯಿಂದ ಹೊರಸೂಸುವ ನೀರು, ಧೂಳು ಕೆರೆಗಳನ್ನು ಸೇರುತ್ತಿದೆ. ಇದನ್ನು ಸೇವಿಸಿ ಪ್ರಾಣಿ, ಪಗಳು ಮೃತಪಡುತ್ತಿವೆ. ಗಣಿಗಾರಿಕೆ ನಿಲ್ಲಿಸಲು ಹಲವು ಭಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ರಾಜಕೀಯ ಒತ್ತಡ ಹಾಗೂ ಆಮಿಷಗಳಿಗೆ ಒಳಗಾಗಿ ಗಣಿಗಾರಿಕೆಯನ್ನು ತಡೆದಿಲ್ಲ ಎಂದು ಆರೋಪಿಸಿದರು.
ಆನವಟ್ಟಿ ಕುಬಟೂರು ರಸ್ತೆಯಲ್ಲಿರುವ ವಿಠಲ ದೇವಸ್ಥಾನದಿಂದ ಗ್ರಾಮ ಪಂಚಾಯಿತಿವರೆಗೆ ಮೆರವಣಿಗೆ ನಡೆಸಲಾಯಿತು. ಹೊನ್ನಪ್ಪ, ಬಿಜೆಪಿ ಮುಖಂಡ ಡಾ. ಜ್ಞಾನೇಶ್​, ವಿಜಯೇಂದ್ರ ಗೌಡ, ರೈತ ಸಂದ ತಾಲೂಕು ಅಧ್ಯ ಸುಭಾಶ್ಚಂದ್ರ, ಜಿಲ್ಲಾಧ್ಯ ಮಂಜು, ಉಮೇಶ್​ ಪಾಟೀಲ್​, ಯೋಗೇಶ್​, ದಾನೇಶ್​, ರೇವಪ್ಪ, ಡಿಎಸ್​ಎಸ್​ ತಾಲೂಕು ಅಧ್ಯ ಮಹೇಶ್​, ಗುರುರಾಜ್​, ನಾರಾಯಣಪ್ಪ, ಪ್ರಭು ಇತರರಿದ್ದರು.
ಆರೋಗ್ಯದಲ್ಲಿ ಏರುಪೇರು
ದೊಡ್ಡ ದೊಡ್ಡ ಬಂಡೆಗಳನ್ನು ಸ್ಫೋಟಿಸಲು ಕ್ರಷರ್​ಗಳು ತಲೆ ಎತ್ತಿವೆ. ಗಣಿಗಾರಿಕೆಯಿಂದ ಸುತ್ತಮುತ್ತಲ ಗ್ರಾಮಗಳ ರೈತರ ಕೊಳವೆಬಾವಿಗಳ ಜಲಕ್ಕೆ ಹಾನಿಯಾಗಲಿದೆ. ಬೆಳೆಗಳ ಮೇಲೆ ಕೆಂಪುಮಿಶ್ರಿತ ಧೂಳು ಬಿದ್ದು ಬೆಳೆಗಳು ನಾಶವಾಗುತ್ತಿದೆ. ಬಿತ್ತಿದ ಬೀಜಗಳು ಮೊಳಕೆಯೊಡೆಯುವ ಮೊದಲೇ ಕಮರುತ್ತಿವೆ. ರೈತರು ಕೃಷಿ ಚಟುವಟಿಕೆ ಮಾಡಲು ಭಯಪಡುವ ಹಾಗೂ ನಷ್ಟಕ್ಕೊಳಗಾಗುವ ಪರಿಸ್ಥಿತಿ ಬಂದಿದೆ. ಗರ್ಭಿಣಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರ ವರ್ತನೆ ಖಂಡನೀಯ
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಕಷ್ಟಗಳಿಗೆ ಸ್ಪಂದಿಸದಿದ್ದಾಗ ಸಹಜವಾಗಿ ದಂಗೆ ಏಳುತ್ತಾರೆ. ಜನತೆ ತಮಗಾಗುವ ತೊಂದರೆ ಬಗ್ಗೆ ಹೇಳಿಕೊಂಡಾಗ ಶಾಸಕರಾದವರು ಸ್ಪಂದಿಸುವ ಗುಣ ಹೊಂದಿರಬೇಕು. ಅದನ್ನು ಬಿಟ್ಟು ದರ್ಪ ತೋಡಿದರೆ ಹೋರಾಟದ ಮೂಲಕವೇ ಉತ್ತರ ನೀಡುವುದು ಅನಿವಾರ್ಯವಾಗಲಿದೆ ಎಂದು ತಾಪಂ ಮಾಜಿ ಸದಸ್ಯ ರುದ್ರಪ್ಪ ಕಡ್ಲೇರ್​ ಅಸಮಾಧಾನ ವ್ಯಕ್ತಪಡಿಸಿದರು. ಕಲ್ಲು ಗಣಿಗಾರಿಕೆ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಮನವಿ ನೀಡಲು ಬಂದಂತಹ ಗ್ರಾಮಸ್ಥರನ್ನು ನಿಂದಿಸಿ ಕಳುಹಿಸಿರುವುದು ಖಂಡನೀಯ. ಇದಕ್ಕೆ ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಉತ್ತರಿಸಲಾಗುವುದು ಎಂದರು.