ಕೋಟಿಪುರ ಗ್ರಾಮದ ನೋಟ  
ಶಿವಮೊಗ್ಗ

ಕೆಳದಿ ಚನ್ನಮ್ಮ ಜನಿಸಿದ ಊರು ಪಾರಂಪರಿಕ ತಾಣವಾಗಿಸಿ

ಪ್ರಮುಖ ಮುಖ್ಯಾಂಶಗಳು

  • ಅಕ್ಕನ ಉಡುಗಣಿಗೆ ಕೋಟಿ ರೂ. ಭಾಗ್ಯ
  • ಕೋಟಿಪುರ ಇತಿಹಾಸ ಸಂರಣೆಗೆ ನಿರಾಸಕ್ತಿ
  • ಚನ್ನಮ್ಮನ ಸ್ಮಾರಕ, ಮ್ಯೂಸಿಯಂ, ರಸ್ತೆ ನಿರ್ಮಾಣಕ್ಕೆ ಆಗ್ರಹ
ಶಿಕಾರಿಪುರ: ತಾಲೂಕಿನ ಉಡುಗಣಿಯು ದೆಹಲಿಯ ಅರಧಾಮ ಮಾದರಿಯಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಆದರೆ ಭಾರತೀಯ ಇತಿಹಾಸದ ವೀರಮಹಿಳೆ ಕೆಳದಿ ರಾಣಿ ಚನ್ನಮ್ಮಾಜಿ ಜನಿಸಿದ ಪುಣ್ಯಭೂಮಿ ಕೋಟಿಪುರ ಅಭಿವೃದ್ಧಿಯಿಂದ ವಂಚಿತಗೊಂಡಿದೆ.
ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ರಾಜಾರಾಮನಿಗೆ ಆಶ್ರಯ ನೀಡಿ, ಔರಂಗಜೇಬನಂತಹ ಮೊಲ್​ ಚಕ್ರವರ್ತಿಯ ಸೈನ್ಯವನ್ನೇ ಎದುರಿಸಿದ ಕೆಳದಿ ರಾಣಿ ಚನ್ನಮ್ಮಾಜಿಯ ಹುಟ್ಟೂರು ಶಿಕಾರಿಪುರ ತಾಲೂಕಿನ ಕೋಟಿಪುರ. ಅಭಿವೃದ್ಧಿ ಇಲ್ಲದ ಕಾರಣ ಈ ಗ್ರಾಮ ಇತಿಹಾಸದ ಪುಟದಿಂದ ತೆರೆಮರೆಗೆ ಸರಿದು ಹೋಗಲಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದೀಗ ಜನತೆ ಈ ಊರಿನ ಅಭಿವೃದ್ಧಿ ಜತೆಗೆ ಚನ್ನಮ್ಮ ಸ್ಮಾರಕ ನಿರ್ಮಾಣಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಶಿಕಾರಿಪುರದಲ್ಲಿ ಅಥವಾ ರಾಜ್ಯ ಹೆದ್ದಾರಿ ಕ್ರಾಸ್​ನಲ್ಲಾಗಲಿ ಕೋಟಿಪುರಕ್ಕೆ ತೆರಳುವ ಮಾರ್ಗದ ಸೂಚನಾ ಲಕಗಳಿಲ್ಲ. ಬಹಳಷ್ಟು ಜನರಿಗೆ ಈ ವೀರವನಿತೆ ಶಿಕಾರಿಪುರ ತಾಲೂಕಿನವಳು ಎಂಬುದೇ ಗೊತ್ತಿರದ ಸಂಗತಿ.
ತಾಲೂಕು ಕೇಂದ್ರದಿಂದ ಸ್ವಲ್ವ ದೂರದಲ್ಲಿರುವ ಕೋಟಿಪುರ (ಹಿಂದಿನಕಾಲದಲ್ಲಿ ಕೋಟಿಸರ) ಐತಿಹಾಸಿಕವಾಗಿ ಅತ್ಯಂತ ಮಹತ್ವದ ಸ್ಥಳ. ಇಲ್ಲಿನ ಲಿಂಗಾಯಿತ ಮನೆತನದ ಸಿದ್ದಪ್ಪ ಶೆಟ್ಟಿ ಮತ್ತು ಪಾರ್ವತಮ್ಮ ದಂಪತಿ ಪುತ್ರಿಯಾಗಿ ಚನ್ನಮ್ಮಾಜಿ ಕ್ರಿ.ಶ.17ನೇ ಶತಮಾನದಲ್ಲಿ ಜನಿಸಿದರು. ಬಾಲ್ಯದಿಂದಲೇ ಸಾಹಸ ಪ್ರವೃತ್ತಿ, ಕುದುರೆ ಸವಾರಿ, ಶಸ್ತ್ರಾಭ್ಯಾಸ ಮಾಡಿದರು. ನಂತರದ ದಿನಗಳಲ್ಲಿ ಕೆಳದಿ  ಸಂಸ್ಥಾನದ ರಾಜ ಸೋಮಶೇಖರ ನಾಯಕ ಅವರನ್ನು ವಿವಾಹವಾಗಿ ಕೆಳದಿಯ ಮಹಾರಾಣಿಯಾದರು. 
ಮೊಲರನ್ನೇ ನಡುಗಿಸಿದ ನಿತೆ 
ಪತಿ ಸೋಮಶೇಖರ ನಾಯಕರ ಅಕಾಲಿಕ ಮರಣದ ನಂತರ ಕೆಳದಿ ಸಂಸ್ಥಾನದ ಆಡಳಿತ ಚುಕ್ಕಾಣಿ ಹಿಡಿದ ಚನ್ನಮ್ಮಾಜಿ, ದ ಆಡಳಿತಗಾರ್ತಿಯಾಗಿ ಹೊರಹೊಮ್ಮಿದರು. ದೆಹಲಿಯ ಮೊಲ್​ ಸಾಮ್ರಾಟ ಔರಂಗಜೇಬನ ಕೆಂಗಣ್ಣಿಗೆ ಗುರಿಯಾಗಿದ್ದ ಛತ್ರಪತಿ ಶಿವಾಜಿಯ ಕಿರಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿ, ಮೊಲ್​ ಸೈನ್ಯವನ್ನು ಎದುರಿಸಿ ಇತಿಹಾಸದ ಪುಟದಲ್ಲಿ ವೀರರಾಣಿಯಾಗಿ ಗುರುತಿಸಿಕೊಂಡ ಮಹಿಳೆ ಕೆಳದಿ ಚನ್ನಮ್ಮ.
ಸ್ಮಾರಕ ನಿರ್ಮಿಸಿ, ರಸ್ತೆ ಒದಗಿಸಿ
ಚನ್ನಮ್ಮನ ಹುಟ್ಟೂರು ಕೋಟಿಪುರದಲ್ಲಿ ಅನೇಕ ಐತಿಹಾಸಿಕ ಕುರುಹುಗಳಿವೆ. ಆದ್ದರಿಂದ ಕೋಟಿಪುರದಲ್ಲಿ ಚನ್ನಮ್ಮಾಜಿಯ ಸ್ಮಾರಕ ನಿರ್ಮಾಣ ಆಗಬೇಕು. ಅವರ ಬಾಲ್ಯದ ನೆನಪುಗಳನ್ನು ಜೀವಂತವಾಗಿಡಲು ಈ ಗ್ರಾಮದಲ್ಲಿ ಬೃಹತ್​ ಸ್ಮಾರಕ ಹಾಗೂ ವಸ್ತುಸಂಗ್ರಹಾಲಯ(ಮ್ಯೂಸಿಯಂ) ನಿರ್ಮಿಸಬೇಕು. ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಶಿಕಾರಿಪುರ&ಬಂದಳಿಕೆಯನ್ನು ಪ್ರವಾಸಿ ಸಕ್ಯೂರ್ಟ್​ಗೆ ಕೋಟಿಪುರವನ್ನು ಸೇರ್ಪಡೆಗೊಳಿಸಬೇಕು. ರಸ್ತೆ ಮತ್ತು ಮೂಲ ಸೌಕರ್ಯ ಒದಗಿಸಬೇಕು. ಕೋಟಿಪುರದಲ್ಲಿರುವ ಐತಿಹಾಸಿಕ ಕುರುಹುಗಳನ್ನು ಪುರಾತತ್ವ ಇಲಾಖೆ ವಶಕ್ಕೆ ಪಡೆದು ಸಂರಸಬೇಕು. ಕಿತ್ತೂರು ಉತ್ಸವದ ಮಾದರಿಯಲ್ಲಿ ಕೋಟಿಪುರದಲ್ಲೂ ಪ್ರತಿವರ್ಷ ರಾಜ್ಯಮಟ್ಟದ ಚನ್ನಮ್ಮಾಜಿ ಉತ್ಸವ ಆಯೋಜಿಸಬೇಕು.  
ಕೆಳದಿಯ ವೀರರಾಣಿ ಚನ್ನಮ್ಮಾಜಿ ನಮ್ಮೂರಿನವರು ಎಂಬುದು ಹೆಮ್ಮೆ. ಕಿತ್ತೂರು ಚನ್ನಮ್ಮನ ಹುಟ್ಟೂರು ಕಾಕತಿ ಮತ್ತು ಐಕ್ಯಸ್ಥಳ ಬೈಲಹೊಂಗಲದಂತೆಯೇ ನಮ್ಮೂರಿನಲ್ಲಿ ಕೆಳದಿ ಚನ್ನಮ್ಮಾಜಿಯ ಸ್ಮಾರಕ ನಿರ್ಮಿಸಬೇಕು. ಉದ್ಯಾನ ನಿರ್ಮಿಸುವುದರ ಜತೆಗೆ ಕಣಿವೆಮನೆ ಕ್ರಾಸ್​ನಲ್ಲಿ ರಾಜ್ಯ ಹೆದ್ದಾರಿಯ ಮಾರ್ಗದ ಸೂಚನಾ ಲಕಗಳು ಮತ್ತು ಬೃಹತ್​ ಪ್ರವೇಶ ದ್ವಾರಗಳನ್ನು ನಿರ್ಮಿಸಬೇಕು. 
> ದೇವರಾಜ್​
 ಸಿದ್ದರಾಮೇಶ್ವರ ಯುವಕ ಸಂದ ಮಾಜಿ ಅಧ್ಯ, ಕಪ್ಪನಹಳ್ಳಿ
ಕಳೆದ ಹತ್ತು ವರ್ಷಗಳಿಂದ ಕೆಳದಿ ಚೆನ್ನಮ್ಮನ ಹುಟ್ಟೂರಾದ ಕೋಟಿಪುರ ಅಭಿವೃದ್ಧಿಗಾಗಿ ಹೋರಾಡುತ್ತಿದ್ದೇವೆ. ಈ ಬಗ್ಗೆ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿದ್ದೇವೆ. ಈ ಐತಿಹಾಸಿಕ ಗ್ರಾಮ ಅಭಿವೃದ್ಧಿ ಇಲ್ಲದೆ ಅಪರಿಚಿತವಾಗಿದೆ. ಹೋರಾಟ ಸಮಿತಿಯಲ್ಲಿ ನಾನು, ಕತ್ತಿಗೆ ಚನ್ನಪ್ಪ, ಮಹಾರುದ್ರ, ಸುಭಾಶ್ಚಂದ್ರ ಹಾಗೂ ಕಪ್ಪನಹಳ್ಳಿ ಗ್ರಾಮಸ್ಥರು ಕೂಡ ಇದ್ದಾರೆ. 
> ಸಾಲೂರು ಕುಮಾರ್​
ಬಸವ ಕೇಂದ್ರದ ಮಾಜಿ ಅಧ್ಯ 
ಕೋಟಿಪುರ ಕೆಳದಿ ರಾಣಿ ಚನ್ನಮ್ಮಾಜಿ ತವರು ಎಂಬ ಉಲ್ಲೇಖ ಹಲವು ಪ್ರಾಚಿನ ಕೃತಿಗಳಲ್ಲಿದೆ. ಪ್ರಸ್ತುತ ಆ ಕಾಲದ ಕೆಲವು ಅವಶೇಷಗಳಿದ್ದರೂ ಪೂರ್ಣ ಅವನತಿಯ ಹಂತದಲ್ಲಿವೆ. ಈಗ ಅಳಿದುಳಿದಿರುವ ಅವಶೇಷಗಳ ಬಳಿ ಉತ್ಖನನ ನಡೆಸಿದರೆ ಇನ್ನಷ್ಟು ಆ ಕಾಲದ ಕುರುಕು ದೊರಕಬಹುದು. 
> ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಸಂಶೋಧಕ
20ಎಸ್​ಕೆಪಿ 2 ಶ್ರೀಪಾದ ಬಿಚ್ಚುಗತ್ತಿ 
ಕೆಳದಿಯ ವೀರರಾಣಿ ಚನ್ನಮ್ಮಾಜಿ ಚಿತ್ರ.