ಸಾಗರ ತಾಲೂಕಿನ ಉಳ್ಳೂರು ಗ್ರಾಮದ ಬಳಿ ಹೆದ್ದಾರಿ ದುರಸ್ತಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ವಸೀಂ, ಉಮೇಶ್, ಶಿವಕುಮಾರ್, ರಾಘವೇಂದ್ರ, ಆಸೀಫ್ ಇತರರಿದ್ದರು. 
ಶಿವಮೊಗ್ಗ

ಹೆದ್ದಾರಿಯಲ್ಲಿ ಗುಂಡಿ ಮುಚ್ಚಲು ಒತ್ತಾಯ | protest

ಸಾಗರ: ರಾಷ್ಟಿಯ ಹೆದ್ದಾರಿ- 69ರಲ್ಲಿ ಅಪಘಾತ ವಲಯದಲ್ಲಿ ಎಚ್ಚರಿಕೆ ಫಲಕ ಅಳವಡಿಸದೆ ನಿರ್ಲಕ್ಷೃ ತೋರಲಾಗಿದೆ ಎಂದು ಆರೋಪಿಸಿ ತಾಲೂಕಿನ ಉಳ್ಳೂರು ಗ್ರಾಮದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಬಿ.ಎಚ್.ರಸ್ತೆಯಲ್ಲಿ ಹೊಂಡಗುಂಡಿಗಳಾಗಿ ಮಳೆಗಾಲದಲ್ಲಿ ವಾಹನ ಸವಾರರಿಗೆ ರಸ್ತೆ ಯಾವುದು? ಗುಂಡಿ ಯಾವುದು ಎಂಬುದೇ ಗೊತ್ತಾಗುತ್ತಿಲ್ಲ. ಪ್ರತಿದಿನ ಎರಡ್ಮೂರು ಅಪಘಾತಗಳಾಗುತ್ತಿವೆ. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷೃವೇ ಇದಕ್ಕೆ ಕಾರಣ ಎಂದು ದೂರಿದರು.
ಉಳ್ಳೂರು ಕೆರೆ ಬಳಿ ದೊಡ್ಡ ಮರಗಳು ಬೆಳೆದಿವೆ. ಗಿಡಗಂಟಿಗಳು ರಸ್ತೆಗೆ ಚಾಚಿಕೊಂಡಿವೆ. ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತಗಳಾಗುತ್ತಿವೆ. ಮರ ಕಡಿತಲೆ ಜತೆಗೆ ರಸ್ತೆ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕಟಾವು ಮಾಡಿಲ್ಲ. ಮರಗಳು ರಸ್ತೆಗೆ ಚಾಚಿಕೊಂಡಿರುವ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆ, ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದೇವೆ. ಆದರೆ ಯಾರೂ ಗಮನ ಹರಿಸುತ್ತಿಲ್ಲ. ತಕ್ಷಣ ರಸ್ತೆ ರಿಪೇರಿ ಜತೆಗೆ ಜಂಗಲ್ ಕಟಾವು ಮಾಡದಿದ್ದರೆ ಶಿವಮೊಗ್ಗದ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ವೇದಿಕೆ ತಾಲೂಕು ಅಧ್ಯಕ್ಷ ವಸೀಂ, ಉಮೇಶ್, ಶಿವಕುಮಾರ್, ರಾಘವೇಂದ್ರ, ಆಸೀಫ್, ರಂಗನಾಥ್, ಫಯಾಜ್, ಶಾಕೀರ್ ಇತರರಿದ್ದರು.