ಅರೆಬಿಳಚಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಆದಿಕರ್ನಾಟಕ ಸಮುದಾಯದವರು ವಾಸಿಸುತ್ತಿರುವ ಬೀದಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಡಿಸಿಎಸ್‌ಎಸ್‌ನ ಟಿ.ಎಚ್.ಹಾಲೇಶಪ್ಪ, ಶೇಷಪ್ಪ, ಪರಮೇಶ್ವರ, ಕೀರ್ತಿ ಪ್ರಸನ್ನ, ಕೃಷ್ಣಪ್ಪ ಮತ್ತಿತರರು ಪ್ರತಿಭಟನೆ ನಡೆಸಿದರು.
- ಡಿಎಸ್‌ಎಸ್‌ನಿಂದ ಪ್ರತಿಭಟನೆ
- ಪಿಡಿಒ ಅಮಾನತಿಗೆ ಒತ್ತಾಯ
ಶಿವಮೊಗ್ಗ: ಭದ್ರಾವತಿ ತಾಲೂಕು ಅರೆಬಿಳಚಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ ಮೀಸಲಿಟ್ಟ (reserved)ಜಾಗ ಒತ್ತುವರಿ ತೆರವು ಮಾಡದ ಪಿಡಿಒ (pdo) ಹಾಗೂ ಭದ್ರಾವತಿ ತಾಪಂ ಇಒ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಿದರು.
ಪರಿಶಿಷ್ಟ ಜಾತಿ ಆದಿಕರ್ನಾಟಕ ಸಮುದಾಯದವರು ಇರುವ ಮೂರು ಬೀದಿಗಳಿವೆ. ಇದರಲ್ಲಿ ಮೂರನೇ ಬೀದಿಗೆ ರಸ್ತೆ ಇಲ್ಲ. ಇರುವ ನಿವೇಶನದಲ್ಲಿ ಅಣ್ಣ ತಮ್ಮಂದಿರು ಮನೆ ಕಟ್ಟಿಕೊಂಡಿದ್ದಾರೆ. ಈ ಎಲ್ಲ ನಿವೇಶನಗಳಿಗೂ ಚಕ್ಕುಬಂದಿಯಲ್ಲಿ ಉತ್ತರಕ್ಕೆ ಪರಿಶಿಷ್ಟ ಜಾತಿ ಕೇರಿಗೆ ಓಡಾಡುವ ರಸ್ತೆ ಎಂದಿದೆ. ಆದರೆ ರಾಜಕೀಯ ಬಲ, ಹಣ ಉಪಯೋಗಿಸಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಓಡಾಡಲು ಕನ್ಸರ‌್ವೆನ್ಸಿ ರಸ್ತೆ ಇಲ್ಲದಂತೆ ಮಾಡಿ ಹಲವು ವರ್ಷಗಳಿಂದ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಜವಳಿ ನಿಗಮದ ಅಧ್ಯಕ್ಷ ಕೆ.ಚೇತನ್ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ, ಶಿವಣ್ಣ ಮತ್ತಿತರರು ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿದರು. ಡಿಎಸ್‌ಎಸ್ ಪ್ರಮುಖರಾದ ಟಿ.ಎಚ್.ಹಾಲೇಶಪ್ಪ ಪರಮೇಶ್ವರ, ಶೇಷಪ್ಪ ಹುಣಸೋಡು, ಹನುಮಂತಪ್ಪ, ಕೃಷ್ಣಪ್ಪ, ಕೀರ್ತಿ ಪ್ರಸನ್ನ, ರುದ್ರೇಶ್ ಇತರರಿದ್ದರು.