ಆರೋಗ್ಯ ಹಕ್ಕಿಗಾಗಿ ಒತ್ತಾಯಿಸಿ ಅರಣ್ಯಮೂಲ ಬುಡಕಟ್ಟು ಒಕ್ಕೂಟದವರು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಾಗರ ಎಸಿ ವೀರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಶಿವಾನಂದ ಕುಗ್ವೆ, ಸೀತಾರಾಮ ಕುರುವರಿ, ರಾಮಣ್ಣ ಹಸಲರು, ದೇವು, ರಮೇಶ, ಶೈಲಜಾ ಇತರರಿದ್ದರು. 
ಶಿವಮೊಗ್ಗ

ಆರೋಗ್ಯ ಹಕ್ಕು ಕಾಯ್ದೆ ರಚನೆಗೆ ಒತ್ತಾಯ | Submission of appeal

ಸಾಗರ: ಆರೋಗ್ಯ ಸೇವೆ ಪ್ರತಿಯೊಬ್ಬರ ಹಕ್ಕು. ಮೂಲಭೂತ ಹಕ್ಕುಗಳಲ್ಲಿ ಒಂದಾಗಬೇಕು ಎಂದು ಒತ್ತಾಯಿಸಿ ಅರಣ್ಯಮೂಲ ಬುಡಕಟ್ಟು ಒಕ್ಕೂಟ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಜಾಥಾ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕಡ್ಡಾಯವಾಗಿ ಸಿಗಬೇಕು. ಈ ಹಿನ್ನೆಲೆಯಲ್ಲಿ ಆರೋಗ್ಯ ಹಕ್ಕಿಗಾಗಿ ಜಾಥಾ ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಬೇರೆಬೇರೆ ರಾಜ್ಯಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧ ಪೂರೈಕೆ ಮಾಡಿ ಆರೋಗ್ಯ ಹಕ್ಕು ನೀಡಿದೆ. ರಾಜ್ಯದಲ್ಲಿಯೂ ತಕ್ಷಣ ಅನುಷ್ಠಾನಕ್ಕೆ ಬರಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಒತ್ತಾಯಿಸಿದರು.
ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಬಿಡಬೇಕು. ಕೆಎ್ಡಿ ಪ್ರಯೋಗಾಲಯವನ್ನು ಸಾಗರದಲ್ಲಿ ಸ್ಥಾಪಿಸಬೇಕು. ಸರ್ಕಾರಿ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧ ಕೇಂದ್ರ ಮುಚ್ಚಿರುವ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕ. ಇದನ್ನು ಪುನಃ ತೆರೆಯಬೇಕು. ಸರ್ಕಾರದ ಆರೋಗ್ಯ ವಿಮಾ ಯೋಜನೆಯಲ್ಲಿ ಖಾಸಗಿ ಅಸ್ಪತ್ರೆಗಳು ರೋಗಿಗಳನ್ನು ಶೋಷಣೆ ಮಾಡುತ್ತಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.
ಅರಣ್ಯಮೂಲ ಬುಡಕಟ್ಟು ಒಕ್ಕೂಟದ ರಾಮಣ್ಣ ಹಸಲರು ಮಾತನಾಡಿ, ರಾಜ್ಯದ 31 ಜಿಲ್ಲೆಗಳನ್ನು ನಮ್ಮ ಸಂಘಟನೆಗಳು ಆರೋಗ್ಯ ಹಕ್ಕಿಗಾಗಿ ೆ. 9ರಿಂದ 17ರವರೆಗೆ  ಜಾಥಾ ಹಮ್ಮಿಕೊಂಡಿವೆ. ಎಲ್ಲ ಸಂಘಟನೆಗಳು ಒಮ್ಮತದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿ ಆರೋಗ್ಯ ಮೂಲಭೂತ ಹಕ್ಕು ಕಾಯ್ದೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಒಂದೊಮ್ಮೆ ಸರ್ಕಾರ ಬೇಡಿಕೆ ಈಡೇರಿಸದಿದ್ದೆ ಅನಿರ್ದಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಗತಿಪರ ಚಿಂತಕ ಸೀತಾರಾಮ ಕುರುವರಿ, ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ, ಡಿಎಸ್‌ಎಸ್ ಸಂಚಾಲಕ ನಾಗರಾಜ್, ಲಕ್ಷ್ಮಮ್ಮ ಮಾತನಾಡಿದರು. ದೇವು ಆಲಳ್ಳಿ, ರಮೇಶ ಐಗಿನಬೈಲು, ಶೈಲಜಾ, ನಾಗರತ್ನ, ಬಂಗಾರಪ್ಪ, ಲಕ್ಷ್ಮಮ್ಮ ಇತರರಿದ್ದರು.