ಶಿವಮೊಗ್ಗದಲ್ಲಿ ಹೈಕೋರ್ಟ್​ ಸಂಚಾರಿ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂದ ಸಾಗರ ಶಾಖೆ ಪದಾಧಿಕಾರಿಗಳು ಎಸಿ ಕಚೇರಿಗೆ ಮನವಿ ಸಲ್ಲಿಸಿದರು. ಮಹೇಶ್​ ಹೆಗಡೆ, ಎಂ.ಜಿ.ರಾವನ್​, ದೀಪಕ್​ ಸಾಗರ್​ ಇತರರಿದ್ದರು. 
ಶಿವಮೊಗ್ಗ

ಶಿವಮೊಗ್ಗದಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಅತಿಹೆಚ್ಚು ಸಿವಿಲ್​ ಮತ್ತು ಕ್ರಿಮಿನಲ್​ ಪ್ರಕರಣ
  • ಶಿವಮೊಗ್ಗದಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯ
  • ಪತ್ರಕರ್ತರ ಸಂಘದ ಸಾಗರ ಶಾಖೆ ಪದಾಧಿಕಾರಿಗಳ ಮನವಿ
ಸಾಗರ: ಶಿವಮೊಗ್ಗದಲ್ಲಿ ಹೈಕೋರ್ಟ್​ ಸಂಚಾರಿ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆ ಮಲೆನಾಡಿನ ಹೆಬ್ಬಾಗಿಲು. ಅತಿದೊಡ್ಡ ವಾಣಿಜ್ಯ ಕೇಂದ್ರ. ಮುತ್ಸದ್ದಿ ರಾಜಕಾರಣಿಗಳು, ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್​.ಶಿವರುದ್ರಪ್ಪ ಸೇರಿ ಅನೇಕ ಸಾಹಿತಿಗಳು, ರಂಗಭೂಮಿ ಕಲಾವಿದರನ್ನು ನಾಡಿಗೆ ನೀಡಿದ ಹೆಗ್ಗಳಿಕೆ ಶಿವಮೊಗ್ಗ ಜಿಲ್ಲೆಯದು. ದಲಿತ ಹೋರಾಟ, ಉಳುವವನೇ ಹೊಲದೊಡೆಯ ಭೂಹಕ್ಕಿನ ಹೋರಾಟಕ್ಕೆ ಕೇಂದ್ರಬಿಂದುವಾಗಿದೆ. ಆದ್ದರಿಂದ ಇಲ್ಲಿಯೇ ಸಂಚಾರಿ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆ ಎಲ್ಲ ೇತ್ರಗಳಲ್ಲೂ ಮುಂಚೂಣಿ ಕಾಯ್ದುಕೊಂಡಿದೆ. ಇದೀಗ ಹೈಕೋರ್ಟ್​ ಸಂಚಾರಿ ಪೀಠಕ್ಕೂ ಅರ್ಹವಾದ ಭೌಗೋಳಿಕ ಪ್ರದೇಶ ಹೊಂದಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿ ಐದು ಜಿಲ್ಲೆಗಳ ಜನರು ಶಿವಮೊಗ್ಗ ಮೂಲಕವೇ ರಾಜಧಾನಿಗೆ ತೆರಳಬಹುದಾದ ಮಾರ್ಗವಿದು. ಜತೆಗೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ವಿಮಾನಯಾನ ಸೌಲಭ್ಯವೂ ಹೊಂದಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಸಿವಿಲ್​ ಮತ್ತು ಕ್ರಿಮಿನಲ್​ ಪ್ರಕರಣಗಳಿವೆ. ಕದಾರರ ಸಂಖ್ಯೆ ಸಹ ಶಿವಮೊಗ್ಗದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳನ್ನು ಒಳಗೊಂಡು ಶಿವಮೊಗ್ಗಕ್ಕೆ ಹೈಕೋರ್ಟ್​ ಸಂಚಾರಿಪೀಠ ಸ್ಥಾಪಿಸುವುದರಿಂದ ಕದಾರರಿಗೆ ಆರ್ಥಿಕ ಹೊರೆ ಕಡಿಮೆಯಾಗಿ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ಪತ್ರಕರ್ತರ ಸಂದ ತಾಲೂಕು ಅಧ್ಯ ಮಹೇಶ್​ ಹೆಗಡೆ, ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾವನ್​, ಜಿಲ್ಲಾ ಕಾರ್ಯದರ್ಶಿ ದೀಪಕ್​ ಸಾಗರ್​, ತಾಲೂಕು ಕಾರ್ಯದರ್ಶಿ ಲೋಕೇಶಕುಮಾರ್​, ಖಜಾಂಚಿ ಗಿರೀಶ್​ ರಾಯ್ಕರ್​, ಜಿಲ್ಲಾ ವಿಶೇಷ ಆಹ್ವಾನಿತ ಜಿ.ನಾಗೇಶ್​, ಮಾ.ಸ.ನಂಜುಂಡಸ್ವಾಮಿ, ಶಿವಕುಮಾರ ಗೌಡ, ಇಮ್ರಾನ್​, ಜಮೀಲ್​, ನಾಗರಾಜ್​, ಕೆ.ಬಿ.ಸತ್ಯನಾರಾಯಣ, ನಾಗರಾಜ ಲಾಳಂಕೆ, ವಸಂತ ಇತರರಿದ್ದರು.