ಜೈನಮುನಿಗಳ ಪಿಂಚ ಬಗ್ಗೆ ಆೇಪಾರ್ಹ ಹೇಳಿಕೆ ನೀಡಿರುವ ಕೇಂದ್ರದ ಮಾಜಿ ಸಚಿವೆ ಮೇನಕಾ ಗಾಂಧಿ ವಿರುದ್ಧ ಕಾನೂನುಕ್ರಮ ಜರುಗಿಸಲು ಒತ್ತಾಯಿಸಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್​ ಪ್ರಮುಖರು ಸಾಗರ ಎಸಿ ಕಚೇರಿಗೆ ಮನವಿ ಸಲ್ಲಿಸಿದರು. ಹಿತಕರ ಜೈನ್​, ನೇಮಯ್ಯ ಜೈನ್​, ಗಜೇಂದ್ರ, ಜ್ಯೋತಿ, ಲತಾ, ಕವಿತಾ ಇತರರಿದ್ದರು. 
ಶಿವಮೊಗ್ಗ

ಮನೇಕಾ ಗಾಂಧಿ ವಿರುದ್ಧ ಕ್ರಮಕ್ಕೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಜೈನಮುನಿಗಳ ಪಿಂಚ ಬಗ್ಗೆ ಆಕ್ಷೇಪಾರ್ಹ ಹೇಳಿಕೆ
  • ಜೈನ ಸಮಾಜ ಸೇವಾ ಟ್ರಸ್ಟ್​ ಅಸಮಾಧಾನ
  • ಮನೇಕಾಗಾಂಧಿ ವಿರುದ್ಧ ಕ್ರಮಕ್ಕೆ ಒತ್ತಾಯ
ಸಾಗರ: ಜೈನಮುನಿಗಳು ಬಳಸುವ ನವಿಲುಗರಿಯಿಂದ ನಿರ್ಮಿಸಿದ ಪಿಂಚ ಬಗ್ಗೆ ಆೇಪಾರ್ಹ ಹೇಳಿಕೆ ನೀಡಿರುವ ಕೇಂದ್ರ ಮಾಜಿ ಸಚಿವೆ ಮೇನಕಾ ಗಾಂಧಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಗುರುವಾರ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್​ ಪ್ರಮುಖರು ಸಾಗರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಜೈನಮುನಿಗಳು ತಮ್ಮ ಆಚರಣೆ, ಸಂದೇಶದ ಮೂಲಕ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಯಾರಿಗೂ ಕೇಡು ಬಯಸದ ಜೈನಧರ್ಮ ಮತ್ತು ಜೈನಮುನಿಗಳ ಆಚಾರ ವಿಚಾರಗಳ ಬಗ್ಗೆ ಯಾರೂ ಅಗೌರವ ತೋರಬಾರದು. ಎಂಟು ಬಾರಿ ಸಂಸದೆ, ಎರಡು ಬಾರಿ ಕೇಂದ್ರದ ವಿವಿಧ ಖಾತೆಗಳನ್ನು ನಿರ್ವಹಿಸಿರುವ ಮನೇಕಾ ಗಾಂಧಿ ಅವರು ಜೈನಧರ್ಮ ಆಚರಣೆ ಕುರಿತು ಅಸಡ್ಡೆಯಿಂದ ಮಾತನಾಡಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ, ಸಮುದಾಯದ ಆಚಾರ ವಿಚಾರವನ್ನು ಪ್ರಶ್ನಿಸುವ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣವೊಂದರಲ್ಲಿ ಹಂಚಿಕೊಂಡಿದ್ದಾರೆ. ಜೈನಮುನಿಗಳು, ದಿಗಂಬರರು, ಭಟ್ಟಾರಕರು ಬಳಸುವ ಪಿಂಚ ಕುರಿತು ಅವರು ನೀಡಿರುವ ಹೇಳಿಕೆ ಆೇಪಾರ್ಹವಾಗಿದೆ ಎಂದು ದೂರಿದರು.
ಜೈನಮುನಿಗಳು ಬಳಸುವ ಪಿಂಚ ನವಿಲುಗರಿಯಿಂದ ಮಾಡಿದ್ದರೂ ಅದು ಬಲಿತ ನವಿಲುಗರಿಗಳು. ವರ್ಷಕ್ಕೊಮ್ಮೆ ನವಿಲುಗಳು ತಮ್ಮ ಗರಿಯನ್ನು ಉದುರಿಸುತ್ತವೆ. ಅದರಿಂದ ಪಿಂಚ ತಯಾರಿಸಲಾಗುತ್ತದೆಯೇ ವಿನ@, ಪಿಂಚ ತಯಾರಿಸಲು ನವಿಲುಗಳಿಗೆ ಹಿಂಸೆ ನೀಡುವುದಿಲ್ಲ. ಮನೇಕಾ ಗಾಂಧಿ ಅವರಿಗೆ ಪ್ರಾಣಿಪಗಳ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ ದೇಶದಲ್ಲಿರುವ ಕಸಾಯಿಖಾನೆಗಳ ವಿರುದ್ಧ ಧ್ವನಿ ಎತ್ತಲಿ. ಕೂಡಲೇ ಮನೇಕಾ ಗಾಂಧಿ ಮೆಯಾಚಿಸಬೇಕು. ಬಿಜೆಪಿಯಿಂದ ಅವರನ್ನು ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್​ ಅಧ್ಯ ಎಸ್​.ವಿ.ಹಿತಕರ ಜೈನ್​, ಕಾರ್ಯದರ್ಶಿ ಕೆ.ಟಿ.ನೇಮಯ್ಯ ಜೈನ್​, ಗಜೇಂದ್ರ, ಅಶೋಕ್​ ಇಂದ್ರ, ಯಶೋಧರ, ಜಿನದತ್ತ ಗೌಡ, ಪ್ರಸಾದ್​, ಸುಧೀರ್​ಕುಮಾರ್​, ವೀರರಾಜ ಜೈನ್​, ಜಯಕುಮಾರ್​, ಯೋಗರಾಜ್​, ಜ್ಯೋತಿ ನೇಮಿರಾಜ್​, ಲತಾ ದೇವರಾಜ್​, ಕವಿತಾ ಜೈನ್​ ಇತರರಿದ್ದರು.