ತುಮರಿಯಲ್ಲಿ ದುರಸ್ತಿ ಕಾಣದಿರುವ ಮಳೆಮಾಪನ ಕೇಂದ್ರ.
- ಮಳೆ ಮಾಪನ ಕೇಂದ್ರಗಳ ನಿಷ್ಕ್ರಿಯದಿಂದ ರೈತರಲ್ಲಿ ಆತಂಕ
- ಗೊಂದಲಕ್ಕೆ ಸಿಲುಕಿರುವ ಬೆಳೆಗಾರರು
- ಹವಾಮಾನ ಆಧಾರಿತ ಬೆಳೆವಿಮೆ ಕಂತು ಪಾವತಿಗೆ ಹಿಂದೇಟು
ತುಮರಿ: ಕೇಂದ್ರ ಸರ್ಕಾರದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಸಂಪೂರ್ಣವಾಗಿ ಸ್ಥಳಿಯ ಮಳೆ ಮತ್ತು ಹವಾಮಾನದ ದತ್ತಾಂಶಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಆದರೆ ಕರೂರು ಹೋಬಳಿಯಲ್ಲಿ ಮಳೆ ಮಾಪನ ಕೇಂದ್ರಗಳು ನಿಷ್ಕ್ರಿಯ ಆಗಿರುವುದರಿಂದ ತುಮರಿ ಭಾಗದ ರೈತರು ಈ ಬಾರಿ ವಿಮೆ ಕಂತು ಪಾವತಿಗೆ ಗೊಂದಲಕ್ಕೆ ಸಿಲುಕಿದ್ದಾರೆ.
ತುಮರಿ, ಬ್ಯಾಕೋಡು, ಸಂಕಣ್ಣ ಶಾನುಭೋಗ ಮತ್ತು ಚೆನ್ನಗೊಂಡ ಗ್ರಾಮ ಪಂಚಾಯಿತಿ ಭಾಗಗಳಲ್ಲಿ ಸ್ಥಾಪಿಸಿರುವ ಮಳೆ ಮಾಪನ ಕೇಂದ್ರಗಳು ಪ್ರಸ್ತುತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಮಲೆನಾಡಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿ ಬೆಳೆ ಹಾನಿ ಸಂಭವಿಸಿದರೂ ಮಾಪನ ಕೇಂದ್ರಗಳ ತಾಂತ್ರಿಕ ದೋಷದಿಂದಾಗಿ ಸರ್ಕಾರದ ದಾಖಲೆಗಳಲ್ಲಿ ಕಡಿಮೆ ಮಳೆ ಅಥವಾ ಸಾಮಾನ್ಯ ಮಳೆ ಎಂದು ನಮೂದಾಗಿದೆ.
2024&25ರಲ್ಲಿ ಸಮರ್ಪಕವಾಗಿ ಬೆಳೆವಿಮೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈ ಬಾರಿ ವಿಮೆ ಕಟ್ಟಬೇಕೇ ಅಥವಾ ಕಟ್ಟಬಾರದೆ ಎಂಬ ಗೊಂದಲ ರೈತ ವಲಯದಲ್ಲಿ ಮೂಡಿದೆ. ಸಾವಿರಾರು ರೈತರಿಗೆ ಇಂದಿಗೂ ಸರಿಯಾಗಿ ಕಳೆದ 2024&25ನೇ ಸಾಲಿನ ಬೆಳೆವಿಮೆ ಪಾವತಿಯಾಗಿಲ್ಲ.
ಕಳೆದ ಬಾರಿ ಕಂತು ಪಾವತಿಸಿದರೂ ತಾಂತ್ರಿಕ ಕಾರಣ ನೀಡಿ ವಿಮೆ ನಿರಾಕರಿಸಲಾಗಿದೆ ಎಂಬುದು ಮಲೆನಾಡು ಭಾಗದ ಅಡಿಕೆ, ಕಾಳುಮೆಣಸು, ಕಾಫಿ, ಭತ್ತ ಬೆಳೆಗಾರರ ಅಳಲು. ಪ್ರಸ್ತುತ ಸಾಲಿನ ಬೆಳೆವಿಮೆ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ, ರೈತರು ಬ್ಯಾಂಕ್ ಮತ್ತು ಸೈಬರ್ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಸಲು ಉತ್ಸಾಹ ತೋರುತ್ತಿಲ್ಲ.
ಮಲೆನಾಡಿನ ಪ್ರತಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಮಳೆ ಮಾಪನ ಕೇಂದ್ರಗಳನ್ನು ತಣವೇ ಸರಿಪಡಿಸಿ ಚಾಲ್ತಿಗೆ ತರಬೇಕು. 2024&25ನೇ ಸಾಲಿನಲ್ಲಿ ತಾಂತ್ರಿಕ ದೋಷದಿಂದ ವಂಚಿತರಾದ ರೈತರಿಗೆ ಮರುಪರಿಶೀಲನೆ ನಡೆಸಿ ತಣ ವಿಮೆ ಹಣ ಬಿಡುಗಡೆ ಮಾಡಬೇಕು. ರೈತರ ಗೊಂದಲ ಬಗೆಹರಿಸುವವರೆಗೆ ಪ್ರಸ್ತುತ ಸಾಲಿನ ಬೆಳೆವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಯೋಜನೆಗಳನ್ನು ೂಷಿಸಿದರೆ ಸಾಲದು, ತಳಮಟ್ಟದ ತಾಂತ್ರಿಕ ವ್ಯವಸ್ಥೆಯನ್ನು ಸರಿಪಡಿಸಬೇಕು.
ಪ್ರಸ್ತುತ ಸಮಸ್ಯೆಯಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗಿರುವುದರಿಂದ ನಾವೂ ಕೂಡ ಅಸಹಾಯಕರಾಗಿದ್ದೇವೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಪತ್ರ ಬರೆಯಲಾಗಿದೆ. ಶ್ರೀದಲ್ಲೇ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀೆಯಿದೆ. ತಾಂತ್ರಿಕ ದೋಷಗಳಿಂದಾಗಿ ರೈತರಿಗೆ ಉಂಟಾಗಿರುವ ತೊಂದರೆಗಳಿಗೆ ನಾವೂ ಕೂಡ ವಿಷಾದ ವ್ಯಕ್ತಪಡಿಸುತ್ತೇವೆ. ರೈತರ ಹಿತರಣೆ ನಮ್ಮ ಮೊದಲ ಆದ್ಯತೆ.
> ಡಾ. ಪ್ರತಿಭಾ, ತಹಸೀಲ್ದಾರ್, ಸಾಗರ
ಬೆಳೆ ವಿಮೆಗೆ ಮಳೆ ಮಾಪನವೇ ಮಾನದಂಡ ಆಗಿರುವುದರಿಂದ, ಸರ್ಕಾರ ತಣವೇ ಈ ಕೇಂದ್ರಗಳನ್ನು ದುರಸ್ತಿ ಮಾಡಬೇಕು. ಅನ್ನ ನೀಡುವ ರೈತನಿಗೆ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಜೀವಂತವಾಗಿರಿಸುವುದು ಸರ್ಕಾರದ ಆದ್ಯ ಕರ್ತವ್ಯ. ಹಳ್ಳಿಯ ಕಟ್ಟಕಡೆಯ ಮಳೆ ಮಾಪನ ಕೇಂದ್ರವೂ ಸುಸ್ಥಿತಿಯಲ್ಲಿರಬೇಕು.
> ಶೇಖರಪ್ಪ ಹೇರಬೆಟ್ಟು, ಕೃಷಿಕ
ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿ ಮಾಡಲು ಕಳೆದ ವರ್ಷ ಈ ಹೊತ್ತಿನಲ್ಲಿ 50ಕ್ಕೂ ಹೆಚ್ಚು ನೋಂದಣಿ ಆಗಿದ್ದವು. ಆದರೆ ಈ ಬಾರಿ ಆರಂಭವಾಗಿ 10 ದಿನಗಳು ಕಳೆದರೂ ಕೇವಲ ನಾಲ್ಕೆದು ರೈತರು ಮಾತ್ರ ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತಿ ಕಡಿಮೆ ರೈತರು ನೋಂದಾಯಿಸಿದ್ದಾರೆ.
> ಸಚಿನ್, ಗ್ರಾಮ ಒನ್ ನೌಕರ, ತುಮರಿ