ಸೊರಬ ತಾಲೂಕಿನ ಕಾಸರಗುಪ್ಪೆ ಗ್ರಾಮದಲ್ಲಿ ನೂತನ ಲವಕುಶ ದೇವಾಲಯದ ಪ್ರವೇಶೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯನ್ನು ಗೊಗ್ಗೆಹಳ್ಳಿ ಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಕೆ.ವಿ.ಗೌಡ, ಪ್ರೊ. ಎಚ್​.ಬಿ.ಪಂಚಾರಯ್ಯ, ಕೆ.ಬಿ.ಎಂ.ಪಟೇಲ್​ ಕಾಸರಗುಪ್ಪೆ, ಎಚ್​.ವಿ.ರವೀಂದ್ರನಾಥ ಮುಂತಾದವರಿದ್ದರು. 
ಶಿವಮೊಗ್ಗ

ಪ್ರಸ್ತುತ ಧರ್ಮ, ಸಂಸ್ಕಾರ ಕುಂಠಿತ

ಪ್ರಮುಖ ಮುಖ್ಯಾಂಶಗಳು

  • ಕಾಸರಗುಪ್ಪೆಯಲ್ಲಿ ಲವ ಕುಶ ದೇವಾಲಯ ಪ್ರವೇಶೋತ್ಸವ
  • ಶ್ರೀ ಮಹಾಂತ ಸ್ವಾಮೀಜಿ ಸಲಹೆ
  • ಪ್ರಸ್ತುತ ಧರ್ಮ, ಸಂಸ್ಕಾರ ಕುಂಠಿತ
ಸೊರಬ: ಮಕ್ಕಳಿಗೆ ಶಿಣ ನೀಡಿದರೆ ಸಾಲದು. ಜತೆಗೆ ಧಾರ್ಮಿಕ ಪ್ರಜ್ಞೆ, ಉತ್ತಮ ಆಚಾರ, ವಿಚಾರಗಳನ್ನು ತಿಳಿಸಿಕೊಟ್ಟಾಗ ಸುಸಂಸತರಾಗಿ ರೂಪುಗೊಳ್ಳುತ್ತಾರೆ ಎಂದು ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಸರಗುಪ್ಪೆ ಗ್ರಾಮದಲ್ಲಿ ಲವ&ಕುಶ ನೂತನ ದೇವಾಲಯ ಪ್ರವೇಶೋತ್ಸವ, ಮರು ಪ್ರಾಣಪ್ರತಿಷ್ಠಾಪನೆ, ಕಲಶಾರೋಹಣದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮನೆಗಳಲ್ಲಿ ಪಾಲಕರು, ಮಕ್ಕಳಿಗೆ ಧರ್ಮ, ಸಂಸ್ಕಾರ ನೀಡುವುದು ಕುಂಠಿತವಾಗುತ್ತಿದೆ. ಮಕ್ಕಳನ್ನು ಉತ್ತಮ ಸಂಸ್ಕಾರ ವಂತರನ್ನಾಗಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕಾಗುತ್ತದೆ. ಈ ಮೂಲಕ ಮಕ್ಕಳು ಭವಿಷ್ಯದಲ್ಲಿ ಗುರುಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳುತ್ತಾರೆ ಎಂದರು.
ಕಾಸರಗುಪ್ಪೆಯು ಈಶ್ವರ ಮತ್ತು ಬಸವೇಶ್ವರ ದೇವರ ಜೋಡಿ ದೇಗುಲಗಳಿರುವ ಅಪರೂಪದ ಗ್ರಾಮ. ಗ್ರಾಮಸ್ಥರು ದೇಗುಲಗಳನ್ನು ಲವ&ಕುಶ ದೇವಸ್ಥಾನವೆಂದು ಕರೆಯುತ್ತಿರುವುದು ವಿಶೇಷ. ಮತ್ತೊಂದೆಡೆ ನಿಸರ್ಗದ ನಡುವೆ ಭಗವಂತ ನೆಲೆ ನಿಂತಿದ್ದಾನೆ. ಇದು ಪ್ರತಿಯೊಬ್ಬರೂ ಸಾಮರಸ್ಯದ ಬಾಳ್ವೆ ಮಾಡಬೇಕೆಂಬ ಸಂದೇಶ ಸಾರುತ್ತದೆ. ತಾಲೂಕಿನ ಅಷ್ಟ ಮಠಗಳ ಶ್ರೀಗಳನ್ನು ಆಮಂತ್ರಿಸಿ ಕಾರ್ಯಕ್ರಮ ನಡೆಸುತ್ತಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಲವ&ಕುಶ ದೇವಸ್ಥಾನ ಜೀಣೋರ್ದ್ಧಾರ ಸಮಿತಿ ಅಧ್ಯ ಕೆ.ವಿ.ಗೌಡ, ನಿವೃತ್ತ ಪ್ರಾಚಾರ್ಯ ಪ್ರೊ. ಎಚ್​.ಬಿ.ಪಂಚಾರಯ್ಯ, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಕೆ.ಬಿ.ಎಂ.ಪಟೇಲ್​ ಕಾಸರಗುಪ್ಪೆ, ಎಚ್​.ವಿ.ರವೀಂದ್ರನಾಥ, ನಿವೃತ್ತ ಉಪ ಅರಣ್ಯ ಸಂರಣಾಧಿಕಾರಿ ಸಿ.ವಿ.ರುದ್ರಮುನಿ ಗೌಡ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಚ್​.ಸಿ.ವೀರಭದ್ರ ಹಿರಳೆ ಅವರನ್ನು ಸನ್ಮಾನಿಸಲಾಯಿತು. ಕ್ಯಾಸನೂರು ಹಿರೇಮಠದ ಶ್ರೀ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮಿ ಶಾಸ್ತ್ರಿ, ಕುಮಾರಸ್ವಾಮಿ ಹಿರೇಮಠ್​ ಮುಂತಾದವರಿದ್ದರು.
ಬದುಕಿನಲ್ಲಿ ಲವಲವಿಕೆಯಿಂದ ಇರಲು ಭಗವಂತನ ಪ್ರೇರಣೆ ಅಗತ್ಯ. ಜೀವಿಗಳಲ್ಲೇ ಮಾನವ ಜನ್ಮ ಶ್ರೇಷ್ಠವಾಗಿದ್ದು, ಕೈಗೊಳ್ಳುವ ಕಾರ್ಯಗಳು ಭಗವಂತನಿಗೆ ಪ್ರಿಯವಾಗುವಂತಿರಬೇಕು. ದೇವಸ್ಥಾನಗಳನ್ನು ನಿರ್ಮಾಣ ಮಾಡುವುದರಿಂದ ಗ್ರಾಮದ ನತೆ, ಗೌರವ, ಶ್ರೇಷ್ಠತೆ ಹೆಚ್ಚಾಗಿ ಪುಣ್ಯದ ಕಾರ್ಯಗಳನ್ನು ಮಾಡಲು ಅವಕಾಶವಾಗುತ್ತದೆ. ಜನ್ಮದಾತರನ್ನು ಪ್ರೀತಿ ಹಾಗೂ ಗೌರವದಿಂದ ಕಂಡಾಗ ದೇವಸ್ಥಾನಗಳನ್ನು ನಿರ್ಮಿಸಿದಷ್ಟೇ ಪುಣ್ಯ ಲಭಿಸುವ ಮೂಲಕ ಬದುಕು ಸಾರ್ಥಕವಾಗುತ್ತದೆ.
> ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ
ಗೊಗ್ಗೆಹಳ್ಳಿ ಪಂಚಮಠ