ಹೊಸನಗರ ತಾಲೂಕಿನ ಕೋಡೂರಿನಲ್ಲಿ ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮವನ್ನು ಮಕ್ಕಳು ಉದ್ಘಾಟಿಸಿದರು. ಗಣೇಶ ಮೂರ್ತಿ, ಪ್ರೊ. ಡಿ.ಎಸ್.ನಾಗರಾಜ್, ಸುಷ್ಮಾ ಇತರರಿದ್ದರು.
ಹೊಸನಗರ: ಮಕ್ಕಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಪ್ರೊ. ಡಿ.ಎಸ್.ನಾಗರಾಜ್ ಹೇಳಿದರು.
ಕೋಡೂರಿಲ್ಲಿ ಕುನ್ನೂರು ಜಾನಕಮ್ಮ ಮಂಜಪ್ಪ ಮತ್ತು ಕೀಳಂಬಿ ಸುಬ್ಬರಾವ್ ದತ್ತಿನಿಧಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಯಲು ಮೊದಲು ಓದುವ ಅಭ್ಯಾಸ ರೂಢಿಯಾಗಬೇಕು. ಸಾಹಿತ್ಯ ಹಾಗೂ ನೀತಿ ಕಥೆಗಳಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಹೊಸನಗರ ತಾಲೂಕು ಅಧ್ಯಕ್ಷ ಗಣೇಶ ಮೂರ್ತಿ ನಾಗರಕೊಡಿಗೆ ಮಾತನಾಡಿ, ದತ್ತಿನಿಧಿ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಶಾಲೆಗಳಲ್ಲಿ ಸಾಹಿತ್ಯದ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.
ದತ್ತಿ ದಾನಿಗಳಿಗೆ ಸನ್ಮಾನಿಸಲಾಯಿತು. ಮಕ್ಕಳು ಭಾಷಣ, ಕವನ, ಹಾಡುಗಳನ್ನು ಹಾಡಿದರು. ಉತ್ತಮ ಭಾಷಣ ಮಾಡಿದ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಮುಖ್ಯಶಿಕ್ಷಕಿ ಸುಷ್ಮಾ, ಎಸ್‌ಡಿಎಂಸಿ ಅಧ್ಯಕ್ಷ ಜಯಪ್ಪ, ದತ್ತಿ ದಾನಿ ವಸಂತ, ಜಿ.ಎನ್.ಬಸಪ್ಪ ಗೌಡ, ಶಿವಾನಂದಪ್ಪ, ಬಸಂತ, ಪ್ರಕಾಶ್, ರತ್ನಮ್ಮ, ಅಶ್ವಿನಿ ಪಂಡಿತ್ ಇತರರಿದ್ದರು.