ಧಿಕ ಮಾಸದ ಪ್ರಯುಕ್ತ ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ದೇವಾಲಯದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಪತ್ನಿ ತೇಜಸ್ವಿನಿ ರಾಘವೇಂದ್ರ ಭಕ್ತರಿಗೆ ಪ್ರಸಾದ ವಿತರಿಸಿದರು. ಬೆಣ್ಣೆ ಪ್ರವೀಣ್, ವೀರನಗೌಡ, ಡಿ.ಎಲ್.ಬಸವರಾಜ್, ರೇಖಾ ರಾಜಶೇಖರ್, ಜಮೀನ್ದಾರ್ ಮಂಜು, ರಾಜು, ಕುಮಾರಣ್ಣ ಇತರರಿದ್ದರು.
ಶಿಕಾರಿಪುರ: ಅಧಿಕ ಮಾಸದಲ್ಲಿ ಸಹಸ್ರಾರು ಭಕ್ತರು ಶ್ರೀ ಹುಚ್ಚರಾಯಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕುಟುಂಬಸಮೇತ ಶ್ರೀ ಹುಚ್ಚರಾಯಸ್ವಾಮಿ ದರ್ಶನ ಪಡೆದು ನಂತರ ಅನ್ನಪ್ರಸಾದವನ್ನು ಭಕ್ತರಿಗೆ ಬಡಿಸಿ ಮಾತನಾಡಿದ ಅವರು, ನಾಡಿನ ಎಲ್ಲ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಅಧಿಕ ಮಾಸದಲ್ಲಿ ಅಧಿಕ ಪುಣ್ಯ ಪ್ರಾಪ್ತಿಗಾಗಿ ಆಗಮಿಸುತ್ತಿರುವ ಭಕ್ತರಿಗೆ ಅನ್ನಪ್ರಸಾದ ನೀಡುವ ಸೌಭಾಗ್ಯ ನಮ್ಮದಾಗಿದೆ. ಇದಕ್ಕಿಂತ ಪುಣ್ಯ ಬೇರೊಂದಿಲ್ಲ ಎಂದರು.
ಅಧಿಕ ಮಾಸದಲ್ಲಿ ಒಂದೇ ದಿನ ಕದರಮಂಡಲಗಿ ಕಾಂತೇಶ, ಸಾತೇನಹಳ್ಳಿ ಶಾಂತೇಶ ಹಾಗೂ ಶಿಕಾರಿಪುರದ ಭ್ರಾಂತೇಶನನ್ನು ದರ್ಶನ ಮಾಡಿದರೆ ಕಾಶಿ, ರಾಮೇಶ್ವರ, ಪುರಿ, ಅಯೋಧ್ಯೆಗೆ ಹೋದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ದಿನೇದಿನೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಶ್ರೀ ಹುಚ್ಚರಾಯಸ್ವಾಮಿ ದಯೆಯಿಂದ ತಾಲೂಕಿನಲ್ಲಿ ಕಾಲಕಾಲಕ್ಕೆ ಮಳೆ-ಬೆಳೆಯಾಗಬೇಕು. ರೈತರ ಬದುಕು ಹಸನಾಗಬೇಕು ಎಂದು ಹೇಳಿದರು.
ತೇಜಸ್ವಿನಿ ರಾಘವೇಂದ್ರ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬೆಣ್ಣೆ ಪ್ರವೀಣ್, ತಾಲೂಕು ಅಧ್ಯಕ್ಷ ವೀರನಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ರೇಖಾ ರಾಜಶೇಖರ್, ಜಮೀನ್ದಾರ್ ಮಂಜು, ರಾಜು, ಕುಮಾರಣ್ಣ ಇತರರಿದ್ದರು. ಮುಂಜಾನೆ ಸಂಸದರ ಕುಟುಂಬದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.