ಕೃಷಿ ಮತ್ತು ತೋಟಗಾರಿಕೆ ಮೇಳ ಕಣ್ತುಂಬಿಕೊಂಡ ಜನರು. 
ಶಿವಮೊಗ್ಗ

ಕೃಷಿ ಮೇಳಕ್ಕೆ ಎರಡನೇ ದಿನ ಜನಸಾಗರ

ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ಮೇಳ(Fair)ದ ಎರಡನೇ ದಿನ ಜನಸಾಗರ ಹರಿದುಬಂದಿತ್ತು. ವಾರಾಂತ್ಯ ಹಾಗೂ ಕನಕದಾಸ ಜಯಂತಿ ನಿಮಿತ್ತ ಕೆಲ ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಕಾರಣ ಮಕ್ಕಳು ಒಳಗೊಂಡಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಮೇಳವನ್ನು ಕಣ್ತುಂಬಿಕೊಂಡರು.
ಪ್ರತಿಯೊಂದು ಮಳಿಗೆಗಳಿಗೂ ಭೇಟಿ ಕೊಟ್ಟು ಕೃಷಿ ಪರಿಕರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವಿಶೇಷವಾಗಿ ಬಟ್ಟೆ, ಆಹಾರ ಮಳಿಗೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳು, ಗೃಹಪಯೋಗಿ ವಸ್ತುಗಳು, ಹಲಸು, ಮಾವು(mango), ತೆಂಗು, ಕಾಳುಮೆಣಸು(Pepper), ಹೂವಿನ ಕುಂಡಗಳನ್ನು ಖರೀದಿಸಿ ಕೊಂಡೊಯ್ದರು. ಶಿವಮೊಗ್ಗ ಮಾತ್ರವಲ್ಲದೆ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಮೇಳಕ್ಕೆ ಆಗಮಿಸಿದ್ದರು.