ರಿಪ್ಪನ್​ಪೇಟೆ ಕಗಚಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಬಾಳೆ ಬೆಳೆ ಹಾನಿಗೀಡಾಗಿರುವುದು. 
ಶಿವಮೊಗ್ಗ

ಕಾಡಾನೆ ದಾಳಿಯಿಂದ ಬೆಳೆಹಾನಿ

ಟಿ.ಎಚ್.ಸಂತೋಷ್ ಕುಮಾರ್
ರಿಪ್ಪನ್​ಪೇಟೆ: ಮೂಗುಡ್ತಿ ವನ್ಯಜಿವಿ ವಲಯದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಗಚಿ ಗ್ರಾಮದಲ್ಲಿ ಕಾಡಾನೆಗಳು ಬೆಳೆಹಾನಿ ಮಾಡಿವೆ.
ಸರ್ವೇ ನಂ.35ರಲ್ಲಿ ಸಿದ್ದಪ್ಪ ಅವರ ಅಡಕೆ ತೋಟದಲ್ಲಿ ತೆಂಗು ಮತ್ತು ಬಾಳೆ ಗಿಡಗಳನ್ನು ಹಾನಿಮಾಡಿವೆ. ನಾಲ್ಕು ವರ್ಷಗಳಿಂದ ಕಾಡಾನೆಗಳ ಮಿತಿಮೀರಿದೆ. ಅರಣ್ಯ ವ್ಯಾಪ್ತಿಯಲ್ಲಿ ಕಂದಕ ನಿರ್ಮಾಣ ಮಾಡಿದ್ದರೂ ಒಂದೆರಡು ಕಡೆಗಳಲ್ಲಿ ಜನ, ಜಾನುವಾರುಗಳ ಓಡಾಟಕ್ಕಾಗಿ ಬಿಡಲಾಗಿದೆ. ಆ ಸ್ಥಳಗಳ ಮೂಲಕವೇ ಆನೆಗಳು ಬಂದು ಹೊಲ, ಗದ್ದೆಗಳನ್ನು ಹಾನಿಮಾಡುತ್ತಿವೆ. ಹಾಗಾಗಿ ಕಂದಕ ನಿರ್ಮಾಣ ಪೂರ್ಣಗೊಳಿಸಿ ಎಂದು ಅರಣ್ಯಾಧಿಕಾರಿಗಳನ್ನು ರೈತರು ಒತ್ತಾಯಿಸಿದರು.
ಬೆಳೆಹಾನಿ ವೀಸಿ ಮಾತನಾಡಿದ ಆರ್​ಎ್​ಒ ಪವನ್​ಕುಮಾರ್​, ಆನೆ ಹಾವಳಿ ತಡೆಗಾಗಿ ಶ್ರೀವೇ ಕಂದಕ ನಿರ್ಮಿಸುವುದಾಗಿ ತಿಳಿಸಿದರು. ಬೆಳೆಗಾರರು ನಷ್ಟ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಮೇಲಧಿಕಾರಿಗಳಿಗೆ ವರದಿ ನೀಡುತ್ತೇನೆ. ರೈತರು ತಮ್ಮ ಕೃಷಿ ಕಾರ್ಯಗಳನ್ನು ಹಗಲಿನಲ್ಲಿಯೇ ಪೂರೈಸಿ, ರಾತ್ರಿ ಸಮಯದಲ್ಲಿ ಬೇಲಿಗಳಿಗೆ ಕರೆಂಟ್​ ಕೊಡಬೇಡಿ ಎಂದು ತಿಳಿಸಿದರು.