ಸಾಗರದಲ್ಲಿ ಆಯೋಜಸಿಇದ್ದ ಮುಖಾಮುಖಿ ಕಾರ್ಯಕ್ರಮವನ್ನು ಎಂಡಿಎಫ್ ಅಧ್ಯಕ್ಷ ಬಿ.ಆರ್.ಜಯಂತ್ ಉದ್ಘಾಟಿಸಿದರು. ಡಾ. ಅನ್ನಪೂರ್ಣಾ, ರವೀಂದ್ರ, ಕೆ.ವೆಂಕಟೇಶ್, ಕೆ.ಎ.ಶ್ರೀಧರ, ಡಾ. ವಿ.ಎನ್.ಶಿಲ್ಪಾ ಇತರರಿದ್ದರು.
- ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯ ಬಿ.ಆರ್.ಜಯಂತ್ ಆಶಯ
- ಮುಖಾಮುಖಿ ಕಾರ್ಯಕ್ರಮ
- ಯುವಪೀಳಿಗೆಗೆ ಇತಿಹಾಸದ ಅರಿವು ಮೂಡಿಸಿ
ಸಾಗರ: ಭೂಮಿಯ ಹಕ್ಕು, ರೈತರ ಬದುಕು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆದ ಕಾಗೋಡು ಸತ್ಯಾಗ್ರಹ ಹೋರಾಟದ ಕುರಿತು ಯುವ ಪೀಳಿಗೆಗೆ ಅರಿವು ಮೂಡಿಸಬೇಕು. ಹೋರಾಟದ ಇತಿಹಾಸ ಅರಿತಾಗ ಪಡೆದಿರುವ ಹಕ್ಕುಗಳ ಬೆಲೆ ಗೊತ್ತಾಗಲಿದೆ ಎಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯ ಬಿ.ಆರ್.ಜಯಂತ್ ಹೇಳಿದರು.
ಕಾಗೋಡು ಸತ್ಯಾಗ್ರಹದ 75ನೇ ವರ್ಷಾಚರಣೆ ಅಂಗವಾಗಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಡಾ. ಜಿ.ಎ.ನಾರಿಬೋಲಿ ಶಿಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮುಖಾಮುಖಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ರೈತರು ತಾವು ಬೆಳೆದ ಬೆಳೆಯ ಬಹುಪಾಲನ್ನು ಭೂಮಾಲೀಕರಿಗೆ ನೀಡಬೇಕಾದ ಅನಿವಾರ್ಯತೆಯಲ್ಲಿದ್ದರು. ಕೊಳಗದ ಅಳತೆಯಲ್ಲೂ ಅನ್ಯಾಯ ನಡೆಯುತ್ತಿತ್ತು. ಇದನ್ನು ಪ್ರಶ್ನಿಸಿ ಕಾಗೋಡಿನಲ್ಲಿ ಆರಂಭವಾದ ಹೋರಾಟ ಮುಂದೆ ಉಳುವವನೇ ಹೊಲದೊಡೆಯ ಆಶಯಕ್ಕೆ ಬಲ ನೀಡಿತು ಎಂದು ತಿಳಿಸಿದರು.
ಕಾಗೋಡು ಸತ್ಯಾಗ್ರಹ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ರಾಮಮನೋಹರ ಲೋಹಿಯಾ ಸೇರಿ ಹಲವು ನಾಯಕರ ಹೋರಾಟ, ನಂತರದ ಭೂ ಸುಧಾರಣಾ ಚಳವಳಿಗಳಿಗೆ ಪ್ರಮುಖ ಹಿನ್ನೆಲೆಯಾಯಿತು. ಭೂಮಾಲೀಕರಿಂದ ಉಳುವವನಿಗೆ ಜಮೀನು ದೊರಕಿಸಿಕೊಟ್ಟ ಹೋರಾಟದ ಲವನ್ನು ಇಂದಿನ ಪೀಳಿಗೆ ಅನುಭವಿಸುತ್ತಿದೆ. ಆದರೆ ಅದರ ಹಿಂದೆ ನಡೆದ ತ್ಯಾಗ, ಬಂಧನ, ದೌರ್ಜನ್ಯ ಮತ್ತು ಹೋರಾಟದ ದಿನಗಳನ್ನು ಮರೆಯಬಾರದು. ಹೋರಾಟಗಳ ನೆನಪು ಅಗತ್ಯ ಎಂದರು.
ಗೇಣಿ ಪದ್ಧತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಹೊಸನಗರ ೇತ್ರದ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು, ಆ ಕಾಲದ ಗೇಣಿ ರೈತರ ಸಂಕಷ್ಟ, ಭೂಮಾಲೀಕರ ದೌರ್ಜನ್ಯ ಹಾಗೂ ಭೂ ಸುಧಾರಣಾ ಕಾಯ್ದೆ ಜಾರಿಯಾದ ಬಳಿಕ ರೈತರಿಗೆ ಹಕ್ಕು ತಲುಪಿಸಲು ನಡೆದ ಪ್ರಯತ್ನಗಳ ಕುರಿತು ವಿವರಿಸಿದರು.
ಬಿ.ಆರ್.ಜಯಂತ್, ಬಿ.ಸ್ವಾಮಿರಾವ್ ಅವರನ್ನು ಸನ್ಮಾನಿಸಲಾಯಿತು. ೇತ್ರ ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ ಅವರು ಎರಡು ಖಂಡುಗ ಕಾದಂಬರಿ ಹಿನ್ನೆಲೆ ಪರಿಚಯಿಸಿದರು. ಭದ್ರಾ ಕಾಡಾ ನಿಗಮದ ಮುಖ್ಯ ಲೆಕ್ಕಾಧಿಕಾರಿ ಸುದರ್ಶನ ಕೋಣೆ ಹೊಸೂರು, ರವೀಂದ್ರ, ಹಸೆಚಿತ್ರ ಕಲಾವಿದ ಚಂದ್ರಶೇಖರ ಸಿರಿವಂತೆ, ರೈತ ಹೋರಾಟಗಾರ ಈಶ್ವರ ನಾಯ್ಕ ಕುಗ್ವೆ, ಎಂಡಿಎ್ ಕೋಶಾಧಿಕಾರಿ ಕೆ.ವೆಂಕಟೇಶ್ ಕವಲಕೋಡು, ಲೇಖಕ ಕೆ.ಎ.ಶ್ರೀಧರ, ಡಾ. ವಿ.ಎನ್.ಶಿಲ್ಪಾ ಇದ್ದರು.