ಸಾಗರದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನವನ್ನು ಡಿ.ಮಂಜುನಾಥ್​ ಉದ್ಘಾಟಿಸಿದರು. ಸತ್ಯನಾರಾಯಣ ಸಿರಿವಂತೆ, ಮಾಲತೇಶಪ್ಪ, ಕೆ.ಎಸ್​.ಕಿರಣ್​, ದಿನೇಶ್​ ಬರದವಳ್ಳಿ ಇತರರಿದ್ದರು. 
ಶಿವಮೊಗ್ಗ

ಜಾನಪದ ಮಹತ್ವದ ಅರಿವು ಮೂಡಿಸಿ

ಸಾಗರ: ಜಾನಪದದ ಮೂಲಬೇರನ್ನು ನಾವು ಗಟ್ಟಿಗೊಳಿಸಬೇಕು. ಆಧುನಿಕ ಜಗತ್ತಿಗೆ ತೆರೆದುಕೊಳ್ಳುವ ತವಕದಲ್ಲಿ ದೇಸಿ ಕಲೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಜಾನಪದವೆಂಬ ವೃ ಹೆಮ್ಮರವಾಗಿ ಬೆಳೆಯಲು ತಳಮಟ್ಟದಿಂದ ಹೆಚ್ಚಿನ ಪ್ರಯತ್ನ ಪ್ರಾರಂಭವಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್​ ಜಿಲ್ಲಾಧ್ಯ ಡಿ.ಮಂಜುನಾಥ್​ ಹೇಳಿದರು.
ಕರ್ನಾಟಕ ಜಾನಪದ ಪರಿಷತ್​ನಿಂದ ಏರ್ಪಡಿಸಿದ್ದ ವಿಶ್ವ ಜಾನಪದ ದಿನ, ಜಾನಪದ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಜಾನಪದ ಕಾರ್ಯಾಗಾರಗಳನ್ನು ನಡೆಸಿ ಮಕ್ಕಳಿಗೆ ಜಾನಪದದ ಮಹತ್ವ ತಿಳಿಸಿಕೊಡಬೇಕು. ಜನಪದ ಬಾಯಿಂದ ಬಾಯಿಗೆ ಹರಿದು ಬಂದ ಗ್ರಾಮೀಣ ಕಲೆ. ಆಧುನಿಕ ಕಲೆಗಳ ಅಬ್ಬರದ ನಡುವೆ ಜಾನಪದ ಶತಮಾನಗಳಿಂದಲೂ ಮುಂದುವರಿದಿದೆ ಎಂದು ತಿಳಿಸಿದರು.
ಶಿಕರು, ಶಿಕರ ಪರ ಇರುವ ಸಂಟನೆಗಳು ಜಾನಪದ ಕಲೆಯನ್ನು ಶಾಲಾ ಹಂತದಲ್ಲಿಯೇ ಕಲಿಸುವ ಕೆಲಸ ಮಾಡಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಹಿರಿಯ ಕಲಾವಿದರನ್ನು ಗೌರವಿಸುವುದು ಮತ್ತೊಬ್ಬರಿಗೆ ಪ್ರೇರಣೆ ನೀಡುತ್ತದೆ ಎಂದರು.
ಪ್ರಾಥಮಿಕ ಶಾಲಾ ಶಿಕರ ಸಂದ ತಾಲೂಕು ಅಧ್ಯ ಮಾಲತೇಶಪ್ಪ ಮಾತನಾಡಿ, ಜಾನಪದ ಕಲೆಯನ್ನು ಕಟ್ಟಿ ಬೆಳೆಸುವಲ್ಲಿ ಜಾನಪದ ಪರಿಷತ್​ ನಿರಂತರವಾಗಿ ಶ್ರಮಿಸುತ್ತಿದೆ. ಜಾನಪದ ಕಲೆ ಗ್ರಾಮೀಣ ಸೊಗಡು ಸಾರುವ ಜತೆಗೆ ಬದುಕಿನ ಸತ್ಯಗಳನ್ನು ಬಿತ್ತರಿಸುತ್ತದೆ. ನಮ್ಮ ಸಂವು ಜನಪದ ಕಲೆ ಉಳಿವಿಗೆ ಅಗತ್ಯ ಸಹಕಾರ ನೀಡುತ್ತದೆ ಎಂದರು.
ಜಾನಪದ ಪರಿಷತ್​ ತಾಲೂಕು ಅಧ್ಯ ಸತ್ಯನಾರಾಯಣ ಸಿರಿವಂತೆ ಮಾತನಾಡಿ, ಜಾನಪದ ಉಳಿದಾಗ ಮಾತ್ರ ನಮ್ಮ ಕಲೆ, ಕಲಾವಿದರ ಪರಂಪರೆ ಮುಂದುವರಿಯಲು ಸಾಧ್ಯವಾಗುತ್ತದೆ. ಜಾನಪದ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವರನ್ನು ಪರಿಷತ್​ ಸನ್ಮಾನಿಸುವ ಮೂಲಕ ಗಮನಾರ್ಹ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಹಿರಿಯ ಕಲಾವಿದರಾದ ಅಣ್ಣಪ್ಪ ಕುಗ್ವೆ, ನಾಗರಾಜ ತೋಂಬ್ರಿ, ಪ್ರಭಾವತಿ ವೆಂಕಟೇಶ್​, ನಾಟಕ ಅಕಾಡೆಮಿ ಪ್ರಶಸ್ತಿ ಪುರಸತೆ ಫಣಿಯಮ್ಮ ಅವರನ್ನು ಸನ್ಮಾನಿಸಲಾಯಿತು. ಕೆ.ಎಸ್​.ಕಿರಣ್​, ದಿನೇಶ್​ ಬರದವಳ್ಳಿ, ಕೆ.ನಾರಾಯಣ, ಸದಾನಂದ ಶರ್ಮ, ಹೂವಪ್ಪ, ನಾರಾಯಣಪ್ಪ ಕುಗ್ವೆ, ರಾಜು ಜನ್ನೆಹಕ್ಲು, ಜ್ಯೋತಿ ಸತೀಶ್​, ರಂಜಿತಾ, ಬಸವರಾಜ, ಸರೋಜಮ್ಮ ಇತರರಿದ್ದರು.