ಸೊರಬದ ಕೋಟಿಪುರದಲ್ಲಿ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳದಲ್ಲಿ ಸಮಾಜ ಸೇವಕ ಕಾರ್ತಿಕ್ ಸಾಹುಕಾರ್ ಮಾತನಾಡಿದರು. ಚರಿತಾ ಕಾರ್ತಿಕ್, ಸಂಪತ್‌ಕುಮಾರ್ ಇತರರಿದ್ದರು.
ಸೊರಬ: ಮಕ್ಕಳಿಗೆ ಆರೋಗ್ಯಕರ ಜೀವನಶೈಲಿ ಮಹತ್ವ ಹಾಗೂ ಪೌಷ್ಟಿಕ ಆಹಾರದ ಅರಿವು ಮೂಡಿಸಬೇಕು ಎಂದು ಸಮಾಜ ಸೇವಕ ಕಾರ್ತಿಕ್ ಸಾಹುಕಾರ್ ಹೇಳಿದರು.
ತಾಲೂಕಿನ ಕೋಟಿಪುರದ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳ ಉದ್ಘಾಟಿಸಿ ಮಾತನಾಡಿ, ಮಕ್ಕಳು ತಾವು ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ ಆಹಾರದ ಮೌಲ್ಯ, ಸ್ವಚ್ಛತೆ ಮತ್ತು ಜವಾಬ್ದಾರಿ ಕಲಿಯುತ್ತಿದ್ದಾರೆ. ಇದು ತುಂಬ ಅಗತ್ಯವಿರುವ ಅನುಭವವಾಗಿದೆ ಎಂದು ತಿಳಿಸಿದರು.
ತಂಡದಲ್ಲಿ ಕೆಲಸ ಮಾಡುವ ಮನೋಭಾವ, ಸ್ವಾವಲಂಬನೆ ಹಾಗೂ ಸೃಜನಶೀಲತೆ ಬೆಳೆಸುವ ಅತ್ಯುತ್ತಮ ವೇದಿಕೆ. ವಿದ್ಯಾರ್ಥಿಗಳು ತಯಾರಿಸಿದ ಮಾದರಿ, ಪ್ರಯೋಗ ಮತ್ತು ಯೋಜನೆಗಳು ವೈಜ್ಞಾನಿಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ, ಹೊಸದನ್ನು ಕಂಡುಹಿಡಿಯುವ ಆಸಕ್ತಿ ಸ್ಪಷ್ಟವಾಗಿ ತೋರಿಸುತ್ತವೆ. ಇಂತಹ ಕಾರ್ಯಕ್ರಮ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಭವಿಷ್ಯದ ವಿಜ್ಞಾನಿಗಳು, ಸಂಶೋಧಕರು ಮತ್ತು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಸಹಾಯ ಮಾಡುತ್ತವೆ ಎಂದರು.
120 ಮಾದರಿ ವಿಜ್ಞಾನ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಆಹಾರ ಮೇಳದಲ್ಲಿ 50ಕ್ಕೂ ಹೆಚ್ಚು ತಿಂಡಿ ತಿನಿಸುಗಳನ್ನು ಮಕ್ಕಳು ತಯಾರಿಸಿಕೊಂಡು ಬಂದಿದ್ದರು.
ತಾಲೂಕು ಯುವಜನ ಸಂಘದ ಅಧ್ಯಕ್ಷ ಸಂಪತ್‌ಕುಮಾರ್, ಶಾಲೆ ಮುಖ್ಯಸ್ಥೆ ಚರಿತಾ ಕಾರ್ತಿಕ್, ಎಲ್ಲಪ್ಪ, ಬಸವರಾಜ್, ಕಿರಣ್, ಕಾಂತಪ್ಪ, ಶಿಫಾನ್, ರೂಪಾ, ರೇಖಾ, ನೇಹಾ, ಅಂಜಲಿ, ಶ್ರುತಿ, ದಿವ್ಯಾ, ಸೌಮ್ಯಾ, ಕಾವ್ಯಾ, ಗೀತಾ, ರೇವತಿ, ಮಧುರಾ, ಭೂಮಿಕಾ, ವಿದ್ಯಾ, ಜ್ಯೋತಿ, ಸ್ಪಂದನಾ, ವೀಣಾ, ರಾಮನಾಯಕ್, ಜಾನ್, ಗಿರೀಶ್ ಬಸಾಪುರ್, ಮಾಲತೇಶ್, ವೀರಭದ್ರ, ಮಂಜುಳಾ, ಸರಿತಾ ಇತರರಿದ್ದರು.