ಭದ್ರಾವತಿಯಲ್ಲಿ ಸಹಕಾರ ಸಪ್ತಾಹವನ್ನು ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ್ ಉದ್ಘಾಟಿಸಿದರು. ಬಿ.ಕೆ.ಶಿವಕುಮಾರ್, ಎಸ್.ಕೆ.ಮರಿಯಪ್ಪ, ಸಿ.ಹನುಮಂತಪ್ಪ, ಡಿ.ಆನಂದ್, ಎಸ್.ಕುಮಾರ್ ಇತರರಿದ್ದರು.
ಭದ್ರಾವತಿ: ಸಹಕಾರ ಸಂಘಗಳು ಜಾತ್ಯತೀತವಾಗಿ, ರಾಜಕೀಯೇತರ ಸಂಸ್ಥೆಗಳಾಗಿ ರೈತರ ಹಿತ ಕಾಯಲು ಮುಂದಾಗಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಎನ್.ವಿದ್ಯಾಧರ್ ಹೇಳಿದರು.
ನಗರದ ವೀರಶೈವ ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್ ಮತ್ತಿತರ ಸಂಘಗಳಿಂದ ಆಯೋಜಿಸಿದ್ದ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳು ಕೇವಲ ಚುನಾವಣೆಗೆ ಸೀಮಿತವಾಗಬಾರದು. ಪರಸ್ಪರ ಹೊಂದಾಣಿಕೆಯಿಂದ ಅವಿರೋಧ ಆಯ್ಕೆಯಾದಾಗ ಸಹಕಾರ ಕ್ಷೇತ್ರಕ್ಕೆ ನಿಜವಾದ ಅರ್ಥ ಬರುತ್ತದೆ. ಅಲ್ಲದೆ ಒಬ್ಬರಿಗೊಬ್ಬರು ಸಹಕಾರಿಯಾಗಿ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಸಂಘ ಕಟ್ಟುವವರಿಗೆ ಅದರ ಕಷ್ಟಗಳೇನೆಂದು ತಿಳಿಯುತ್ತದೆ. ತಪ್ಪುಗಳನ್ನು ತಿದ್ದಿಕೊಂಡು ಸಂಘಗಳನ್ನು ಮುನ್ನಡೆಸಬೇಕು. ಕಾರ್ಯದರ್ಶಿಗಳು ಮತ್ತು ನಿರ್ದೇಶಕರ ನಡುವೆ ಹೊಂದಾಣಿಕೆ ಇರಬೇಕು ಎಂದು ತಿಳಿಸಿದರು.
ಉಪನ್ಯಾಸಕ ಎಂ.ಯು.ಏಕಾಂತ್ ಉಪನ್ಯಾಸ ನೀಡಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಬಿ.ಕೆ.ಶಿವಕುಮಾರ್, ಸಿ.ಹನುಮಂತಪ್ಪ, ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಡಿ.ಆನಂದ್, ಎಸ್.ಕುಮಾರ್, ರ‌್ಯಾಮ್ಕೋಸ್ ಅಧ್ಯಕ್ಷ ಎಚ್.ಎಲ್.ಷಡಕ್ಷರಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಗಣೇಶ್, ಸಹಕಾರಿಗಳಾದ ಬಿ.ಆರ್.ದಶರಥಗಿರಿ, ಎಚ್.ಎನ್.ನಾಗರಾಜ್, ಎಚ್.ಲೋಕೇಶಪ್ಪ, ಎಂ.ಕುಬೇಂದ್ರಪ್ಪ, ಪ್ರಕಾಶ್ ತಳ್ಳಿಕಟ್ಟೆ, ಬಿ.ಎಚ್.ವಸಂತ್, ಅರುಣಾದೇವಿ ಇತರರಿದ್ದರು.