ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಯಥಾಸ್ಥಿತಿ ಮುಂದುವರಿಸಲು ಆಗ್ರಹಿಸಿ ಎಸ್.ಎನ್.ಚನ್ನಬಸಪ್ಪ ಅವರು ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು. ಎಸ್.ಜ್ಞಾನೇಶ್ವರ್, ಶಿವಕುಮಾರ್ ಇದ್ದರು. 
ಶಿವಮೊಗ್ಗ

ಸಹ್ಯಾದ್ರಿಯಲ್ಲಿ ಪಿಜಿ ಕೋರ್ಸ್ ಮುಂದುವರಿಸಿ I pg course sahayadri

ಪ್ರಮುಖ ಮುಖ್ಯಾಂಶಗಳು

  • ಕೂಡಲೇ ಅಧಿಸೂಚನೆ ಹೊರಡಿಸಿ
  • ಕುಲಸಚಿವರಿಗೆ ಶಾಸಕ ಚೆನ್ನಿ ಮನವಿ
ಶಿವಮೊಗ್ಗ: ನಗರದ ಸಹ್ಯಾದ್ರಿ (sahaydri) ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಈ ಹಿಂದಿನಂತೆಯೇ ಮುಂದುವರಿಸಬೇಕು. ಈ ಸಂಬಂಧ ಪರಿಷ್ಕೃತ ಅಧಿಸೂಚನೆ (notification) ಹೊರಡಿಸಬೇಕೆಂದು ಒತ್ತಾಯಿಸಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಂಗಳವಾರ ಕುವೆಂಪು (kuvempu) ವಿವಿ ಕುಲಸಚಿವ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು.
ಎಂ.ಎಸ್ಸಿ ಬಯೋಟೆಕ್ನಾಲಜಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಜನರಲ್ ಕೆಮಿಸ್ಟ್ರಿ ಹಾಗೂ ಎಂಎ ರಾಜ್ಯಶಾಸ್ತ್ರ ಕೋರ್ಸ್‌ಗಳ ಪ್ರವೇಶಾತಿಗೆ ತಕ್ಷಣವೇ ಅವಕಾಶ ಕಲ್ಪಿಸಬೇಕು. 75 ವರ್ಷಗಳಿಂದ ಸಹ್ಯಾದ್ರಿ ಕಾಲೇಜು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುತ್ತಿದೆ. ಇತ್ತೀಚೆಗೆ ಬಯೋಟೆಕ್ನಾಲಜಿಯಲ್ಲಿ ವಿವಿಯ 10 ರ‌್ಯಾಂಕ್‌ಗಳಲ್ಲಿ 5 ಹಾಗೂ ರಾಜ್ಯಶಾಸ್ತ್ರದಲ್ಲಿ ಎರಡು ರ‌್ಯಾಂಕ್‌ಗಳನ್ನು ಸಹ್ಯಾದ್ರಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಪಡೆದಿದ್ದಾರೆ. ಕಾಯಂ ಪ್ರಾಧ್ಯಾಪಕರನ್ನೇ ಹೊಂದಿರುವ ಈ ಕೋರ್ಸ್‌ಗಳಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊರೆ ಇರಲಿಲ್ಲ. ಆದರೂ ಪ್ರವೇಶಾತಿ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾರಿಗೆ ಮತ್ತು ಆರ್ಥಿಕ ದೃಷ್ಟಿಯಿಂದ ಸಹ್ಯಾದ್ರಿ ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ವಿವಿ ತಕ್ಷಣವೇ ಪರಿಷ್ಕೃತ ಅಧಿಸೂಚನೆ ಹೊರಡಿಸದಿದ್ದರೆ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ವಿವಿಯ ಸಿಂಡಿಕೇಟ್ ಸದಸ್ಯ ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯ ಎಸ್.ಜ್ಞಾನೇಶ್ವರ್ ಇದ್ದರು.