ತಾಳಗುಪ್ಪಕ್ಕೆ ಭೇಟಿ ನೀಡಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರೊಂದಿಗೆ ಸಿದ್ದಾಪುರ ರೈಲ್ವೆ ಹೋರಾಟ ಸಮಿತಿ ಸದಸ್ಯರು ತಾಳಗುಪ್ಪ ಹುಬ್ಬಳ್ಳಿ ಸಂಪರ್ಕದ ರೈಲು ಮಾರ್ಗ ರಚನೆ ಕುರಿತು ಸಮಾಲೋಚಿಸಿದರು. ಹರತಾಳು ಹಾಲಪ್ಪ, ವಾಸುದೇವ ಬಿಳಗಿ, ನಾಗರಾಜ ದೋಶೆಟ್ಟಿ, ಗುರುನಾಥ ವೆರ್ಣೇಕರ್​ ಇತರರಿದ್ದರು. 
ಶಿವಮೊಗ್ಗ

ತಾಳಗುಪ್ಪ - ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣ ಖಚಿತ

ಪ್ರಮುಖ ಮುಖ್ಯಾಂಶಗಳು

  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ
  • ರೈಲ್ವೆ ಹೋರಾಟ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ
  • ತಾಳಗುಪ್ಪ - ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣ ಖಚಿತ
ತಾಳಗುಪ್ಪ: ತಾಳಗುಪ್ಪ ಹುಬ್ಬಳ್ಳಿ ಸಂಪರ್ಕದ ರೈಲು ಮಾರ್ಗ ಖಚಿತವಾಗಿ ಆಗುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು. ತಾಳಗುಪ್ಪ ರೈಲ್ವೆ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ವೀಕ್ಷಣೆಗಾಗಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಸಿದ್ದಾಪುರ ರೈಲ್ವೆ ಹೋರಾಟ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.
2023&24ರ ಬಜೆಟ್​ನಲ್ಲಿ 3.93 ಕೋಟಿ ರೂ. ವೆಚ್ಚದಲ್ಲಿ ತಾಳಗುಪ್ಪ ಹುಬ್ಬಳ್ಳಿ ರೈಲುಮಾರ್ಗ ನಿರ್ಮಿಸಲು ಸಮೀೆ ನಡೆದು ಟೆಂಡರ್​ ಪಡೆದ ಹೈದರಾಬಾದ್​ ಮೂಲದ ಕಂಪನಿ ಎಫ್​ಎಸ್​ಎಲ್​ ವರದಿ ಸಲ್ಲಿಸಿದೆ. ರೈಲ್ವೆ ಇಲಾಖೆ ಡಿಪಿಆರ್​ ಸಿದ್ಧಪಡಿಸಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಪ್ರಯತ್ನ ನಡೆಸುತ್ತಿದ್ದು ರೈಲು ಮಾರ್ಗ ನಿರ್ಮಾಣ ಖಂಡಿತ ಆಗುತ್ತದೆ. ಈ ಕುರಿತು ಸಂಶಯ ಬೇಡ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಸಿದ್ದಾಪುರ ರೈಲ್ವೆ ಹೋರಾಟ ಸಮಿತಿಯ ವಾಸುದೇವ ಬಿಳಗಿ, ನಾಗರಾಜ ದೋಶೆಟ್ಟಿ, ಗುರುನಾಥ ವೆರ್ಣೇಕರ್​, ವೆಂಕಟರಮಣ ಮಡಿವಾಳ, ಕಾಶಿನಾಥ ಗುಡಿಗಾರ, ಗಣಪತಿ ಹೆಗಡೆ, ಪ್ರಸನ್ನ ಕೆರೆಕೈ, ರಾಜಶೇಖರ ಗಾಳಿಪುರ, ಮಲ್ಲಿಕಾರ್ಜುನ ಹಕ್ರೆ, ಮೋಹನ ಶೇಟ್​ ಮತ್ತಿತರರಿದ್ದರು.