ಹೊಸನಗರ ಸಾರಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಮಾಜಿಕ ಅರಣ್ಯ ಸಂರಕ್ಷಣೆ ಕುರಿತ ಸಮಾಲೋಚನಾ ಸಭೆ ನಂತರ ಗಿಡ ನೆಡಲಾಯಿತು. ಅನಂತ ಹೆಗಡೆ ಆಶೀಸರ, ನರೇಂದ್ರಕುಮಾರ್, ಹನಿಯ ರವಿ ಇದ್ದರು.
ಹೊಸನಗರ: ಶರಾವತಿ ಉಪನದಿಗಳ ಉಗಮ ಪ್ರದೇಶಗಳಲ್ಲಿ ಈ ಹಿಂದೆ ಸಾಮಾಜಿಕ ಅರಣ್ಯ ನಿರ್ಮಾಣ ಮಾಡಿದ್ದರಿಂದ ಅಮ್ಮನಘಟ್ಟ ಸಂರಕ್ಷಣೆಯಾಗಿದೆ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ತಾಲೂಕಿನ ಬಟ್ಟೆಮಲ್ಲಪ್ಪ ಸಾರಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಮಾಜಿಕ ಅರಣ್ಯ ಸಂರಕ್ಷಣೆಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನಂದಕುಮಾರ್ ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ಶೇ.20 ಅರಣ್ಯೀಕರಣಕ್ಕೆ ಅವಕಾಶವಿದೆ. ಇಂತಹ ಯೋಜನೆ ಮೂಲಕ ಸಾಮಾಜಿಕ ಅರಣ್ಯ ಬೆಳೆಸಬಹುದು ಎಂದರು.
ವೃಕ್ಷಲಕ್ಷ ಆಂದೋಲನದ ಹನಿಯ ರವಿ ಮಾತನಾಡಿ, ಯಾವ ಕಾರಣಕ್ಕೂ ಸಾಮಾಜಿಕ ಅರಣ್ಯದಲ್ಲಿ ಅಕೇಶಿಯಾ ಬೆಳೆಸುವಂತಿಲ್ಲ. ಮಿಶ್ರ ಸಹಜ ಅರಣ್ಯಕ್ಕೆ ಅವಕಾಶವಾಗಲಿ ಎಂದು ಹೇಳಿದರು.
ಕೇಶವಪುರದ ಟಿ.ಮಂಜುನಾಥ್ ಮಾತನಾಡಿ, 80ರ ದಶಕದಲ್ಲಿ ಎಂಪಿಎಂ ವಿರೋಧಿಸಿ ಸಾಮಾಜಿಕ ಅರಣ್ಯಕ್ಕೆ ಅನುವು ಮಾಡಿಕೊಟ್ಟ ಪರಿಣಾಮ ಪ್ರಸ್ತುತ ಸಹಜ ಅರಣ್ಯ ಬೆಳೆಯಲು ಅನುಕೂಲವಾಗಿದೆ ಎಂದರು.
ಆಂದೋಲನದ ಸಂಚಾಲಕ ಕೆ.ವೆಂಕಟೇಶ್ ಮಾತನಾಡಿ, ಪಹಣಿಯಲ್ಲಿ ಸಾಮಾಜಿಕ ಅರಣ್ಯ ನಮೂದಿಸಬೇಕು ಎಂದು ಸಲಹೆ ನೀಡಿದರು. ಕೆ.ಹುಣಸವಳ್ಳಿ ಸಾಮಾಜಿಕ ಅರಣ್ಯ ವೀಕ್ಷಣೆ, ಬೀಜದುಂಡೆ ಬಿತ್ತನೆ ನಡೆಯಿತು.
ಎಸಿಎಫ್ ಪ್ರಭಾಕರ್, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಚಕ್ರವಾಕ ಸುಬ್ರಹ್ಮಣ್ಯ, ಕೆ.ಪಿ.ಕೃಷ್ಣಮೂರ್ತಿ, ಧನುಷ್ ಸಾರಾ, ಕುಮಾರ ಗೌಡ, ಶ್ರೀಪಾದ ಗದ್ದೆಮನೆ, ಶ್ರೀಪಾದ ಬಿಚ್ಚುಗತ್ತಿ, ಅರಣ್ಯ ಇಲಾಖೆ, ತಾಪಂ ಅಧಿಕಾರಿಗಳು ಇದ್ದರು.