ಹೊಳೆಹೊನ್ನೂರು ಸಮೀಪದ ಸಿದ್ಲಿಪುರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಎಸ್.ಆರ್.ಸತೀಶ್ ಅವರನ್ನು ಸನ್ಮಾನಿಸಲಾಯಿತು. ನಾರಾಯಣಪ್ಪ, ಸಂಜಯ್, ಹರೀಶ್ ಇತರರಿದ್ದರು.
ಹೊಳೆಹೊನ್ನೂರು: ಅನ್ಯ ಭಾಷೆಗಳನ್ನು ಪ್ರೀತಿಸಿ ಮಾತೃಭಾಷೆ ಆರಾಧಿಸುವುದನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದು ಎಪಿಎಂಸಿ ಮಾಜಿ ಸದಸ್ಯ ಎಸ್.ಆರ್.ಸತೀಶ್ ಹೇಳಿದರು.
ಸಮೀಪದ ಸಿದ್ಲೀಪುರದಲ್ಲಿ ಗ್ರಾಮಸ್ಥರು ಹಾಗೂ ಯುವಕ ಮಂಡಳಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ದೈನಂದಿನ ವ್ಯವಹಾರಗಳನ್ನು ಕನ್ನಡ ಭಾಷೆಯಲ್ಲೇ ಮಾಡಬೇಕು. ಜಾತಿ ಮತಗಳನ್ನು ಮೀರಿ ಕನ್ನಡಿಗರು ನಾವೆಲ್ಲ ಒಂದೇ. ಪಾಲಕರು ಕನ್ನಡ ಶಾಲೆಗೆ ಮಕ್ಕಳನ್ನು ದಾಖಲಿಸಲು ಮುಂದಾಗಬೇಕು. ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡ ಭಾಷೆಯಲ್ಲಿ ಸಂವಹನ ನಡೆಸಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕ ರಮೇಶ್ ನಾಯ್ಕ, ಮುಖಂಡರಾದ ಜಿ.ಎನ್.ರಂಗಪ್ಪ, ನಾರಾಯಣಪ್ಪ, ಹನುಮಂತ ಪಟೇಲ್, ರಫೀಕ್, ಸಂಜಯ್, ವೆಂಕಟೇಶ್, ಸ್ವಾಮಿ, ಹರೀಶ್ ಇತರರಿದ್ದರು.