ತೀರ್ಥಹಳ್ಳಿ ಪಪಂನಿಂದ ಸೆರೆಹಿಡಿಯಲಾದ ನಾಯಿಗಳನ್ನು ಬೋನಿನಲ್ಲಿ ಇಟ್ಟಿರುವುದು. 
ಶಿವಮೊಗ್ಗ

ನಾಯಿಗಳ ಸೆರೆ ಕಾರ್ಯ ವಿರೋಧಿಸಿ ದೂರು | street dogs capture

ಶಿವಕುಮಾರ ಎಸ್.ಪಿ.
ತೀರ್ಥಹಳ್ಳಿ: ಬೀದಿ ನಾಯಿಗಳ ಹಾವಳಿ ಕಡಿಮೆ ಮಾಡುವ ಸಲುವಾಗಿ ಪಟ್ಟಣ ಪಂಚಾಯಿತಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ಬೆಂಗಳೂರಿನ ಪೀಪಲ್ ಾರ್ ಅನಿಮಲ್ ಸಂಸ್ಥೆ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದೆ.
ಸಂತಾನಶಕ್ತಿ ಹರಣ ಶಸಚಿಕಿತ್ಸೆಯ ಮೂಲಕ ಬೀದಿ ನಾಯಿಗಳನ್ನು ನಿಯಂತ್ರಣ ಮಾಡುವ ಸಲುವಾಗಿ ಪಪಂ ನಿರ್ಣಯ ಕೈಗೊಂಡಿದೆ. ನಾಯಿಗಳನ್ನು ಹಿಡಿದಿರುವುದು ಮತ್ತು ಕಸ ವಿಲೇವಾರಿ ಘಟಕದಲ್ಲಿ ಅವುಗಳನ್ನು ಕೂಡಿಹಾಕಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದನ್ನು ಗಮನಿಸಿ ತೀರ್ಥಹಳ್ಳಿಗೆ ಧಾವಿಸಿದ ತಂಡ ಪಪಂ ಕ್ರಮವನ್ನು ಖಂಡಿಸಿ ದೂರು ದಾಖಲಿಸಿದೆ.
ಕಬ್ಬಿಣದ ತಂತಿಯನ್ನು ಬಳಸಿ ಅಮಾನವೀಯವಾಗಿ ನಾಯಿಗಳನ್ನು ಹಿಡಿಯಲಾಗಿದೆ. ಹಿಡಿದಿಟ್ಟಿರುವ ನಾಯಿಗಳಿಗೆ ಆಹಾರವನ್ನೂ ನೀಡುತ್ತಿಲ್ಲ. ಈ ಕಾರ್ಯಾಚರಣೆಯಲ್ಲಿ ಕೆಲ ನಾಯಿಗಳು ಮತಪಟ್ಟಿರುವ ಸಾಧ್ಯತೆಯೂ ಇದೆ ಎಂದು ಪೀಪಲ್ ಾರ್ ಅನಿಮಲ್ ಸಂಸ್ಥೆ ಹರೀಶ್ ಆರೋಪಿಸಿದ್ದಾರೆ. ಕೆಲ ಸ್ಥಳೀಯರೂ ಕೂಡಾ ಈ ಕಾರ್ಯಾಚರಣೆಯನ್ನು ವಿರೋಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಪಟ್ಟಣ ವ್ಯಾಪ್ತಿಯಲ್ಲಿ ನಾಯಿಗಳ ಕಾಟ ವಿಪರೀತವಾಗಿದೆ. ಇದನ್ನು ನಿಯಂತ್ರಿಸುವುದು ಅನಿವಾರ್ಯ. ಈ ಮೊದಲು ಸುಮಾರು 80 ನಾಯಿಗಳಿಗೆ ಶಸಚಿಕಿತ್ಸೆ ಮಾಡಲಾಗಿದೆ. ಅವುಗಳಿಗೆ ಚಿಕನ್ ಬೇಯಿಸಿ ಹಾಕಲಾಗುತ್ತಿದೆ. 20 ನಾಯಿಗಳನ್ನು ಹಿಡಿದಿಟ್ಟಿದ್ದು ಅವುಗಳನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಶಸಚಿಕಿತ್ಸೆ ಮಾಡಲು ಜೂ.14ರಂದು ಶಿವಮೊಗ್ಗದಿಂದ ವೈದ್ಯರ ತಂಡ ಬರುತ್ತಿದೆ ಎಂದಿದ್ದಾರೆ.