ಮನೆ ಕಳೆದುಕೊಂಡ ಕುಟುಂಬಗಳಿಗೆ ಸಾಗರ ನಗರಸಭೆಯಿಂದ ಪರಿಹಾರ ಧನದ ಚೆಕ್ ಅನ್ನು ಶಾಸಕ ಗೋಪಾಲಕೃಷ್ಣ ಬೇಳೂರು ನೀಡಿದರು. ಕಲಸೆ ಚಂದ್ರಪ್ಪ, ಸುರೇಶ್ ಬಾಬು, ಮಂಡಗಳಲೆ ಗಣಪತಿ ಇತರರಿದ್ದರು. 
ಶಿವಮೊಗ್ಗ

ಮನೆ ಕಳೆದುಕೊಂಡವರಿಗೆ ಪರಿಹಾರದ ಚೆಕ್

ಸಾಗರ: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ನಗರಸಭೆಯಿಂದ ಪರಿಹಾರ ಧನದ ಚೆಕ್ ಹಾಗೂ ವೈಯಕ್ತಿಕ ಧನಸಹಾಯ ನೀಡಿದರು.
ಪಟ್ಟಣದಲ್ಲಿ ಮಳೆಯಿಂದ ಮನೆ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಜನರೊಂದಿಗೆ ಚರ್ಚಿಸಿದರು. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಶ್ರೀಧರನಗರ 9ನೇ ತರಗತಿ ವಿದ್ಯಾರ್ಥಿ ಆಕಾಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕಲಸೆ ಚಂದ್ರಪ್ಪ, ಅನಿತಾಕುಮಾರಿ, ಸುರೇಶ್ ಬಾಬು, ಮಂಡಗಳಲೆ ಗಣಪತಿ, ಸೈಯದ್ ಜಾಕೀರ್, ರವಿಕುಮಾರ್, ತಾರಾಮೂರ್ತಿ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇತರರಿದ್ದರು.